ಕಲಬುರಗಿ ಜಿಲ್ಲಾ ತಂಡದ ಶ್ರೀಹರಿ (ಎಡ) ಮತ್ತು ದಾವಣಗೆರೆ ಜಿಲ್ಲೆಯ ತನ್ಮಯ್ (ಬಲ) ಚೆಂಡಿಗಾಗಿ ಸೆಣಸಾಟ ನಡೆಸಿದರು
–ಪ್ರಜಾವಾಣಿ ಚಿತ್ರ: ಎಸ್.ಕೆ.ದಿನೇಶ್
ಬೆಂಗಳೂರು: ರಾಜ್‌ಮಹಲ್ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಸೋಮವಾರ ನಡೆದ ಲೀಗ್‌ನ ಪಂದ್ಯದಲ್ಲಿ ರಾಜ್‌ಮಹಲ್ ಪರ ರಿಷಿ 16 ಮತ್ತು ಮಿಥಿಲ್ 12 ಅಂಕ ಗಳಿಸಿದರು.
ಫಲಿತಾಂಶ: ಬಾಲಕರು: ಚಿಕ್ಕಮಗಳೂರು ಜಿಲ್ಲೆ 74–12ರಿಂದ ಮಂಡ್ಯ ಜಿಲ್ಲೆ ವಿರುದ್ಧ; ಚಾಮರಾಜನಗರ ಜಿಲ್ಲೆ 56–52ರಿಂದ ಮೈಸೂರು ಜಿಲ್ಲೆ ವಿರುದ್ಧ; ದಕ್ಷಿಣ ಕನ್ನಡ ಜಿಲ್ಲೆ 74–21ರಿಂದ ಕಲಬುರಗಿ ಜಿಲ್ಲೆ ವಿರುದ್ಧ; ಕೋಲಾರ ಜಿಲ್ಲೆ 85–42ರಿಂದ ಬಳ್ಳಾರಿ ಜಿಲ್ಲೆ ವಿರುದ್ಧ; ದಾವಣಗೆರೆ ಜಿಲ್ಲೆ 58–42 ಕಲಬುರಗಿ ಜಿಲ್ಲೆ ವಿರುದ್ಧ; ರಾಜ್‌ಮಹಲ್ ಬಿ.ಸಿ 55–14ರಿಂದ ಲಕ್ಷ್ಮನ್ ಬಿ.ಸಿ ವಿರುದ್ಧ; ಮೈಸೂರು ಜಿಲ್ಲೆ ಎ 57–07ರಿಂದ ಕೋಲಾರ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿತು.
ಬಾಲಕಿಯರು: ಧಾರವಾಡ ಜಿಲ್ಲೆ ಬಿ 33–13ರಿಂದ ಮೈಸೂರು ಜಿಲ್ಲೆ ಬಿ ಎದುರು; ದಾವಣಗೆರೆ ಜಿಲ್ಲೆ 35–17ರಿಂದ ಕೋಲಾರ ಜಿಲ್ಲೆ ಎದುರು; ವಿಜಯಪುರ ಜಿಲ್ಲೆ 60–23 ಮೈಸೂರು ಜಿಲ್ಲೆ ಬಿ ಎದುರು; ಕೋಲಾರ ಜಿಲ್ಲೆ 19–18ರಿಂದ ಚಿಕ್ಕಮಗಳೂರು ಜಿಲ್ಲೆ ಎದುರು ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.