ADVERTISEMENT

ಮಾಸ್ಟರ್ಸ್‌ ಅಥ್ಲೆಟಿಕ್ಸ್‌: ಮೈಸೂರು ಚಾಂಪಿಯನ್‌

ಬಿಡುವು ನೀಡಿದ ಮಳೆ; 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 21:00 IST
Last Updated 13 ನವೆಂಬರ್ 2022, 21:00 IST
ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಆಶ್ರಯದಲ್ಲಿ ಓವೆಲ್‌ ಮೈದಾನದಲ್ಲಿ ಭಾನುವಾರ ನಡೆದ 42ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 30ರಿಂದ 55 ವರ್ಷದೊಳಗಿನವರ 10ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು–ಪ್ರಜಾವಾಣಿ ಚಿತ್ರ
ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಆಶ್ರಯದಲ್ಲಿ ಓವೆಲ್‌ ಮೈದಾನದಲ್ಲಿ ಭಾನುವಾರ ನಡೆದ 42ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 30ರಿಂದ 55 ವರ್ಷದೊಳಗಿನವರ 10ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು–ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರಿನ ಅಥ್ಲೀಟ್‌ಗಳುಅರಮನೆ ನಗರಿಯಲ್ಲಿ ಎರಡು ದಿನಗಳವರೆಗೆ ನಡೆದ 42ನೇ ರಾಜ್ಯ ಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಪಾರಮ್ಯ ಮೆರೆದರು. 2ನೇ ಸ್ಥಾನ ಕೋಲಾರದ ಪಾಲಾಯಿತು.

ಓವೆಲ್‌ ಮೈದಾನದಲ್ಲಿಮಾಸ್ಟರ್ಸ್ ಅಥ್ಲೆಟಿಕ್ಸ್‌ ಅಸೋಸಿಯೇಷನ್ ಆಫ್‌ ಕರ್ನಾಟಕ, ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂಮೈಸೂರುಅಥ್ಲೆಟಿಕ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಗುರಿ ತಲುಪಿದರು.

10ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ 45 ವರ್ಷದೊಳಗಿನವರಲ್ಲಿ ಬೆಂಗಳೂರಿನ ತಿಲಕ್‌‌ 38.38 ನಿಮಿಷದಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಹಿಳೆಯರ 50 ವರ್ಷದೊಳಗಿನವರಲ್ಲಿ 10 ಸಾವಿರ ಮೀಟರ್‌ ಸ್ಪರ್ಧೆಯಲ್ಲಿ ಮಂಗಳೂರಿನ ಬೀನಾ ಫೆರ್ನಾಂಡಿಸ್ ಅವರು 58 ನಿಮಿಷಗಳಲ್ಲಿ ತಲುಪಿ ಗೆದ್ದರು.

ADVERTISEMENT

ಫಲಿತಾಂಶ
ಪುರುಷರು: 10000 ಮೀ ಓಟ
30 ವರ್ಷದೊಳಗಿನವರು:
ಶಿವರಾಜ್‌ ಬಿರಾದಾರ್‌ (ಬೆಂಗಳೂರು, ಸಮಯ: 45.05 ನಿಮಿಷ)–1, ಜೆ.ಅಭಿಷೇಕ್‌ (ಮೈಸೂರು)–2.

35 ವರ್ಷದೊಳಗಿನವರು: ಮಲ್ಲಪ್ಪ ಪೂಜಾರಿ (ಧಾರವಾಡ, ಸಮಯ–41.41 ನಿಮಿಷ.)–1, ಉದಯ ಬಿಲ್ಲವ (ಮೈಸೂರು)–2, ಪ್ರದ್ಯುಮ್ಮ (ಕೋಲಾರ)–3.

40 ವರ್ಷದೊಳಗಿನವರು: ಕಾರ್ತಿಕ್‌ ಆನಂದ್‌ (ಬೆಂಗಳೂರು, ಸಮಯ 38.38 ನಿಮಿಷ)–1, ಕೆ. ಮಂಜುನಾಥ–2.

45 ವರ್ಷದೊಳಗಿನವರು: ತಿಲಕ್‌ (ಬೆಂಗಳೂರು, ಸಮಯ 38.38 ನಿಮಿಷ)–1, ಎಂ.ವೆಂಕಟೇಶ (ಕೋಲಾರ)–2, ಎಸ್‌.ರಮೇಶ (ಕೋಲಾರ)–3.

55 ವರ್ಷದೊಳಗಿನವರು: ಮುನಿರತ್ನಯ್ಯ (ಕೋಲಾರ–ಸಮಯ, 47.28 ನಿಮಿಷ)–1, ಎಸ್‌.ಮಹೇಶ್‌(ಕೋಲಾರ)–2, ವೇಮಣ್ಣ(ಕೋಲಾರ)–3.

60 ವರ್ಷದೊಳಗಿನವರು: ಎಂ.ಯೋಗೇಂದ್ರ (ಮೈಸೂರು–ಸಮಯ–54.03 ನಿಮಿಷ)–1 ಎಚ್‌.ಎಲ್‌. ಬಸವರಾಜ (ಕೋಲಾರ)–2.

65 ವರ್ಷದೊಳಗಿನವರು: ಐ.ಬಸವರಾಜು (ಧಾರವಾಡ ,1.23 ಗಂಟೆ)–1.

5000 ಮೀ ಓಟ
55 ವರ್ಷದೊಳಗಿನವರು:
ಮುನಿರತ್ನಯ್ಯ (ಕೋಲಾರ, ಸಮಯ22:45 ನಿಮಿಷ)–1, ಮುನಿರಾಜಪ್ಪ (ಹಾಸನ)–2, ಅನ್ವರ್‌ ಕಟಪಾಡಿ (ಉಡುಪಿ)–3.

60 ವರ್ಷದೊಳಗಿನವರು: ಎಂ.ಯೋಗೇಂದ್ರ(ಮೈಸೂರು–24.32)–1, ಶಿವಪುತ್ರಪ್ಪ ಬಳ್ಳಿ –(ಬಾಗಲಕೋಟೆ)–2.

65 ವರ್ಷದೊಳಗಿನವರು: ಬಿ.ಎಸ್‌.ಹಿರೇಗೌಡ (ಧಾರವಾಡ, ಸಮಯ–25.13 ನಿಮಿಷ)–1, ಬಸವರಾಜ ಬಿಜ್ಜರಗಿ–2, ರಂಗಸ್ವಾಮಿ (ಹಾಸನ)–3.

ಮಹಿಳೆಯರು
10000 ಮೀ ಓಟ
50 ವರ್ಷದೊಳಗಿನವರು:
ಬೀನಾ ಫೆರ್ನಾಂಡಿಸ್‌ (ಮಂಗಳೂರು, ಸಮಯ–58.36 ನಿಮಿಷ)–1, ಲಕ್ಷ್ಮಮ್ಮ(ಕೋಲಾರ)–2, ಎ.ಟಿ.ಲಲಿತಾ (ಮೈಸೂರು)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.