ADVERTISEMENT

ಟೇಕ್ವಾಂಡೊ: ಪ್ರವಲಿಕಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2023, 20:34 IST
Last Updated 26 ಜೂನ್ 2023, 20:34 IST
ಪ್ರವಲಿಕ
ಪ್ರವಲಿಕ   

ಬೆಂಗಳೂರು: ನಗರದ ಕೆ. ಆರ್. ರಸ್ತೆಯ ಪ್ಯಾಂಥರ್ಸ್ ಟೇಕ್ವಾಂಡೊ ಆಕಾಡೆಮಿಯ ಪ್ರವಲಿಕ ವಿ.ಕುಷ್ಟಗಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿರುಮಲಶೆಟ್ಟಿಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನ ಸೀನಿಯರ್‌ ಮಹಿಳೆಯರ ಪ್ಲಸ್‌ 73 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದರು.

ಸೆಪ್ಟೆಂಬರ್‌ನಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೇಕ್ವಾಂಡೊ ಚಾಂಪಿಯನ್‌ಷಿಪ್‌ಗೆ ಪ್ರವಲಿಕ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಅವರ ತರಬೇತುದಾರರಾದ ಸತೀಶ್‌ ಕುಮಾರ್ ಎಸ್‌. ಹಾಗೂ ನವೀನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT