ಟೋಕಿಯೊ: ಆತಿಥೇಯ ಜಪಾನ್ ದೇಶಕ್ಕೆ ಮೊದಲ ದಿನವೇ ಚಿನ್ನದ ಪದಕ ಒಲಿಯಿತು.
ಪುರುಷರ 60 ಕೆಜಿ ವಿಭಾಗದ ಜುಡೊ ಸ್ಪರ್ಧೆಯಲ್ಲಿ ನೊಹಿಸಾ ಟಕಾಟೊ ಚಿನ್ನದ ಪದಕ ಗೆದ್ದರು. ಜಪಾನಿನಲ್ಲಿ 140 ವರ್ಷಗಳ ಹಿಂದೆ ಜುಡೊ ಸಮರ ಕಲೆ ಪ್ರವರ್ಧಮಾನಕ್ಕೆ ಬಂದಿತ್ತು. ಟಕಾಟೊ ಫೈನಲ್ ಬೌಟ್‌ನಲ್ಲಿ ಥೈವಾನ್‌ನ ಯಾಂಗ್ ಯುಂಗ್ ವಿ ಎದುರು ಜಯಿಸಿದರು.
ಟಕಾಟೋ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 2016 ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.