ADVERTISEMENT

ಟೊಕಿಯೊ ಒಲಿಂಪಿಕ್ಸ್‌: ‘ಪರಿಸರಸ್ನೇಹಿ’ ಪದಕ ಅನಾವರಣ

ರಾಯಿಟರ್ಸ್
Published 24 ಜುಲೈ 2019, 19:44 IST
Last Updated 24 ಜುಲೈ 2019, 19:44 IST
ಟೊಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳನ್ನು ಬುಧವಾರ ಅನಾವರಣಗೊಳಿಸಲಾಯಿತು. ಪದಕಗಳನ್ನು ವಿನ್ಯಾಸಗೊಳಿಸಿರುವ ಜುನಿಶಿ ಕವಾನಿಶಿ ಅವರು ಮಾಹಿತಿ ನೀಡಿದರು  –ಎಎಫ್‌ಪಿ ಚಿತ್ರ
ಟೊಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳನ್ನು ಬುಧವಾರ ಅನಾವರಣಗೊಳಿಸಲಾಯಿತು. ಪದಕಗಳನ್ನು ವಿನ್ಯಾಸಗೊಳಿಸಿರುವ ಜುನಿಶಿ ಕವಾನಿಶಿ ಅವರು ಮಾಹಿತಿ ನೀಡಿದರು  –ಎಎಫ್‌ಪಿ ಚಿತ್ರ   

ಟೊಕಿಯೊ: ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳನ್ನು ಬುಧವಾರ ಅನಾವರಣಗೊಳಿಸಲಾಯಿತು.

ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಕಲಾವಿದರಾದ ಜುನಿಶಿ ಕವಾನಿಶಿ ಅವರು ವಿನ್ಯಾಸಗೊಳಿಸಿದ್ದಾರೆ. ಅನಾವರಣ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬ್ಯಾಚ್ ಮತ್ತು ಜಪಾನ್‌ನ ಪ್ರಧಾನಿ ಶಿಂಝೊ ಅಬೆ ಹಾಜರಿದ್ದರು.

ಎಲೆಕ್ಟ್ರಾನಿಕ್ಸ್‌ ತ್ಯಾಜ್ಯದಿಂದ ಈ ಪದಕಗಳನ್ನು ವಿನ್ಯಾಸಗೊಳಿಸಲಾಗಿದೆ. ಜಪಾನ್‌ನಲ್ಲಿ ವಿವಿಧೆಡೆಯಿಂದ ದೇಣಿಗೆಯಾಗಿ ಪಡೆದ 6.21 ಮಿಲಿಯನ್ ಎಲೆಕ್ಟ್ರಾನಿಕ್ಸ್‌ ತ್ಯಾಜ್ಯವನ್ನು ಬಳಸಲಾಗಿದೆ. ಪ್ರತಿಯೊಂದು ಪದಕವೂ 85 ಮಿಲಿಮೀಟರ್ ವ್ಯಾಸ ಹೊಂದಿವೆ. ಅದರಲ್ಲಿ ಗ್ರೀಕ್‌ ದೇವತೆಯ ಚಿತ್ರವನ್ನು ರಚಿಸಲಾಗಿದೆ. ಜೊತೆಗೆ ಒಲಿಂಪಿಕ್ಸ್‌ ಸಂಕೇತ (ಐದು ರಿಂಗ್‌ಗಳು) ಕೂಡ ಅದರಲ್ಲಿದೆ.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶಿಂಝೊ ಅಬೆ, ‘ಕ್ರೀಡೆಯು ವಿಶ್ವವನ್ನು ಒಗ್ಗೂಡಿಸುತ್ತದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ. ಅದೇ ಕ್ರೀಡೆಯ ಮೂಲ ಉದ್ದೇಶವೂ ಹೌದು. 55 ವರ್ಷಗಳ ಹಿಂದೆ ಟೊಕಿಯೊದಲ್ಲಿ ಒಲಿಂಪಿಕ್ಸ್‌ ಆಯೋಜನೆಗೊಂಡಾಗ ಜಾಗತಿಕ ಸೌಹಾರ್ದತೆಯ ಪಾಠವನ್ನು ಕಲಿತೆವು. ಈ ಬಾರಿಯೂ ಅಂತಹದ್ದೇ ಅತ್ಯಮೋಘವಾದ ಕೂಟವನ್ನು ಆಯೋಜಿಸುತ್ತೇವೆ’ ಎಂದರು.

ಈ ಬಾರಿಯ ಕೂಟಕ್ಕೆ ಈಗಾಗಲೇ 3.22 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿವೆ. ಸ್ವಯಂ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಎರಡು ಲಕ್ಷ ಜನರು ಅರ್ಜಿ ಹಾಕಿದ್ದಾರೆ.

ಕೂಟ ನಡೆಯಲು ಇನ್ನೂ ಒಂದು ವರ್ಷ ಇರುವಾಗಲೇ ಎಲ್ಲ ಸಿದ್ಥತೆಗಳೂ ಪೂರ್ಣಗೊಂಡಿರುವುದನ್ನು ಈಚೆಗೆ ಐಒಸಿಯ ಅಧಿಕಾರಿಗಳು ಶ್ಲಾಘಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.