ADVERTISEMENT

Tokyo Olympics: ರಷ್ಯಾ ಈಜುಪಟುಗಳ ಕಲೆಗೆ ಒಲಿದ ಚಿನ್ನ

ರಾಯಿಟರ್ಸ್
Published 7 ಆಗಸ್ಟ್ 2021, 12:50 IST
Last Updated 7 ಆಗಸ್ಟ್ 2021, 12:50 IST
ರಷ್ಯಾ ಈಜುಪಟುಗಳ ತೋರಿದ ಕಲೆಯ ಶೈಲಿ– ಎಎಫ್‌ಪಿ ಚಿತ್ರ
ರಷ್ಯಾ ಈಜುಪಟುಗಳ ತೋರಿದ ಕಲೆಯ ಶೈಲಿ– ಎಎಫ್‌ಪಿ ಚಿತ್ರ   

ಟೋಕಿಯೊ: ಸ್ವೆಟ್ಲಾನಾ ರೊಮಾಶಿನಾ ಅವರು ಒಲಿಂಪಿಕ್ಸ್‌ನಲ್ಲಿ ಏಳನೇ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಅವರಿದ್ದ ರಷ್ಯಾದ ಈಜುಗಾರ್ತಿಯರ ತಂಡವು ಆರ್ಟಿಸ್ಟಿಕ್ ಈಜು ವಿಭಾಗದ ಫ್ರೀ ರೂಟೀನ್‌ ವಿಭಾಗದಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಶನಿವಾರ ನಡೆದ ಫೈನಲ್‌ನಲ್ಲಿ ರಷ್ಯಾ ಒಟ್ಟು 196.079 ಪಾಯಿಂಟ್ಸ್ ಕಲೆಹಾಕಿನ ಚಿನ್ನಕ್ಕೆ ಮುತ್ತಿಟ್ಟಿತು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೀನಾ ತಂಡವು (193.5310 ಪಾಯಿಂಟ್ಸ್) ತನ್ನ ಪದಕ ಉಳಿಸಿಕೊಂಡಿತು. ಕಂಚಿನ ಪದಕವು ಉಕ್ರೇನ್ ತಂಡದ ಪಾಲಾಯಿತು. ಆ ತಂಡವು 190.3018 ಪಾಯಿಂಟ್ಸ್ ಸಂಗ್ರಹಿಸಿತು.

ಈ ಒಲಿಂಪಿಕ್ಸ್‌ನಲ್ಲಿ ರಷ್ಯಾಕ್ಕೆ ಆರ್ಟಿಸ್ಟಿಕ್ ಈಜು ವಿಭಾಗದಲ್ಲಿ ಒಲಿದ ಆರನೇ ಚಿನ್ನದ ಪದಕ ಇದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.