ಟೋಕಿಯೊ: ಭಾರತದ ಪದಕದ ಭರವಸೆಯಾಗಿದ್ದ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಪದಕದ ಕನಸು ಕಮರಿದೆ.
ಶನಿವಾರ ನಡೆದ ಮಹಿಳೆಯರ ಮಿಡ್ಲ್‌ವೇಟ್ (75 ಕೆ.ಜಿ.) ವಿಭಾಗದಲ್ಲಿ ಪೂಜಾ ರಾಣಿ, ಚೀನಾದ ಚಿಯಾನ್ ಲೀ ವಿರುದ್ಧ 5-0ರ ಅಂತರದಲ್ಲಿ ಸೋಲು ಅನುಭವಿಸಿದರು.
ಇದರೊಂದಿಗೆ ಲವ್ಲಿನಾ ಬೊರ್ಗೊಹೈನ್ ಅವರ ಅದೇ ಸಾಧನೆ ಸರಿಗಟ್ಟಲು ಸಾಧ್ಯವಾಗಲಿಲ್ಲ. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಲವ್ಲಿನಾ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 30 ವರ್ಷದ ಪೂಜಾ, ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಡುವ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಆದರೆ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಚೀನಾದ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪದಕ ಕೈತಪ್ಪಿದೆ.
ಎರಡು ಬಾರಿಯ ಏಷ್ಯನ್ ಚಾಂಪಿಯನ್, ಛಲಗಾರ್ತಿ ಪೂಜಾ ವೃತ್ತಿ ಜೀವನಕ್ಕೆ ಮಾರಕವಾಗಿದ್ದ ಭುಜ ನೋವಿನಿಂದ ಚೇತರಿಸಿಕೊಂಡು ಮತ್ತೆ ಬಾಕ್ಸಿಂಗ್ ರಿಂಗ್‌ಗಿಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.