ADVERTISEMENT

Tokyo Olympics | ಸ್ಪ್ರಿಂಗ್ಬೋರ್ಡ್‌: ಕ್ಸೀ ಸಿಯಿಗೆ ‘ಡಬಲ್’ ಸಂಭ್ರಮ

ರಾಯಿಟರ್ಸ್
Published 3 ಆಗಸ್ಟ್ 2021, 19:57 IST
Last Updated 3 ಆಗಸ್ಟ್ 2021, 19:57 IST
ಚೀನಾದ ಕ್ಸೀ ಸಿಯಿ –ಎಎಫ್‌ಪಿ ಚಿತ್ರ
ಚೀನಾದ ಕ್ಸೀ ಸಿಯಿ –ಎಎಫ್‌ಪಿ ಚಿತ್ರ   

ಟೋಕಿಯೊ: ಗಾಳಿಯಲ್ಲಿ ದೇಹವನ್ನು ತೂರಿ ವೈವಿಧ್ಯತೆ ಮೆರೆದ ಚೀನಾದ ಕ್ಸೀ ಸಿಯಿ ಅವರು ಒಲಿಂಪಿಕ್ಸ್‌ನ ಪುರುಷರ ಸ್ಪ್ರಿಂಗ್‌ಬೋರ್ಡ್‌ ಸ್ಪರ್ಧೆಯಲ್ಲಿ ‘ಚಿನ್ನ ಡಬಲ್‌’ ಸಂಭ್ರಮದಲ್ಲಿ ಮಿಂದರು.

ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ 20 ವರ್ಷಗಳಲ್ಲಿ ವೈಯಕ್ತಿಕ ಮತ್ತು ಸಿಂಕ್ರನೈಸ್ಟ್‌ ಮೂರು ಮೀಟರ್ಸ್ ಸ್ಪ್ರಿಂಗ್‌ಬೋರ್ಡ್‌ನಲ್ಲಿ ಚಾಂಪಿಯನ್‌ ಆದ ಮೊದಲ ಪುರುಷ ಡೈವರ್‌ ಎನಿಸಿಕೊಂಡರು. ಚೀನಾದವರೇ ಆದ ಕ್ಸಿಯಾಂಗ್ ನೀ 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಸ್ಪ್ರಿಂಗ್‌ಬೋರ್ಡ್‌ನಲ್ಲಿ ಚೀನಾ ಪಾರಮ್ಯ ಮೆರೆಯಿತು. ಕ್ಸೀ ಸಿಯಿ ಅವರ ಚಿನ್ನದ ಸಾಧನೆಯ ಬೆನ್ನಲ್ಲೇ 19 ವರ್ಷದ ವಾಂಗ್‌ ಜೊಂಗ್ಯಾನ್ ಬೆಳ್ಳಿ ಪದಕ ಗೆದ್ದುಕೊಂಡರು. ಬ್ರಿಟನ್‌ನ ಜ್ಯಾಕ್ ಲಾಘರ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ADVERTISEMENT

ಸ್ಪರ್ಧೆಯ ಉದ್ದಕ್ಕೂ ಅಗ್ರಸ್ಥಾನಗಳನ್ನು ಉಳಿಸಿಕೊಂಡು ಬಂದ ಕ್ಸೀ ಮತ್ತು ವಾಂಗ್ ಕ್ರಮವಾಗಿ558.75 ಮತ್ತು 534.90 ಪಾಯಿಂಟ್ಸ್ ಕಲೆಹಾಕಿದರು. ಸ್ಪರ್ಧೆಯ ನಂತರ ಜೋರಾಗಿ ಕಿರುಚಾಡಿ ಸಂಭ್ರಮ ವ್ಯಕ್ತಪಡಿಸಿದರು.

ಬುಧವಾರ ನಡೆಯಲಿರುವ 10 ಮೀಟರ್ಸ್ ಪ್ಲಾಟ್‌ಫಾರ್ಮ್‌ ವಿಭಾಗದಲ್ಲಿ ಚೀನಾದ ಚೆನ್ ಯುಕ್ಸಿ ಚಿನ್ನ ಗೆಲ್ಲುವ ನೆಚ್ಚಿನ ಡೈವರ್ ಎನಿಸಿದ್ದಾರೆ. ಅವರಿಗೆ ಈಗ 15 ವರ್ಷ ವಯಸ್ಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.