ADVERTISEMENT

Tokyo Olympics ಗಾಲ್ಫ್: ಕನ್ನಡತಿ ಅದಿತಿಗೆ ಕೈತಪ್ಪಿದ ಐತಿಹಾಸಿಕ ಪದಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 5:14 IST
Last Updated 7 ಆಗಸ್ಟ್ 2021, 5:14 IST
ಅದಿತಿ ಅಶೋಕ್
ಅದಿತಿ ಅಶೋಕ್   

ಟೋಕಿಯೊ: ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್, ಒಲಿಂಪಿಕ್ಸ್ ಗಾಲ್ಫ್ ಕ್ರೀಡೆಯಲ್ಲಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.

ಆರಂಭದ ಸುತ್ತಿನಿಂದಲೂ ಅಮೋಘ ಸಾಮರ್ಥ್ಯ ತೋರುತ್ತ ಮುನ್ನಡೆದ ಅದಿತಿಗೆ ಕೊನೆಯ ಸುತ್ತಿನಲ್ಲಿ ಆಘಾತ ಎದುರಾಗಿದೆ.

ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ಅಂತಿಮವಾಗಿ ನಾಲ್ಕನೇ ಸ್ಥಾನ ಗಳಿಸಿದ ಕನ್ನಡತಿ ಅದಿತಿ, ಸ್ವಲ್ಪದರಲ್ಲೇ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.

ADVERTISEMENT

ಮೊದಲ ಮೂರು ಸುತ್ತಿನ ಅಂತ್ಯಕ್ಕೆ ಪದಕ ಬೇಟೆಯಲ್ಲಿದ್ದ ಅದಿತಿ, ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಎರಡನೇ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಹಾಗಿದ್ದರೂ 23 ವರ್ಷದ ಬೆಂಗಳೂರು ಮೂಲದ ಅದಿತಿ, ಒಲಿಂಪಿಕ್ಸ್ ಗಾಲ್ಫ್ ಇತಿಹಾಸದಲ್ಲೇ ಭಾರತದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅದಿತಿ 41ನೇ ಸ್ಥಾನ ಗಳಿಸಿದ್ದರು. ಈಗ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.