ಟೋಕಿಯೊ: ಆರು ಬಾರಿಯ ವಿಶ್ವ ಚಾಂಪಿಯನ್ ಭಾರತದ ಹೆಮ್ಮೆಯ ಮೇರಿ ಕೋಮ್, ಟೋಕಿಯೊ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ನಡೆದ ರೌಂಡ್ 32ರ ಹಂತದ ಪಂದ್ಯದಲ್ಲಿ ಮೇರಿ ಕೋಮ್ ಅವರು ಡೊಮಿನಿಕಾದ ಮಿಗುಲಿನಾ ಹೆರ್ನಾಂಡೆಜ್ ವಿರುದ್ಧ ಗೆಲುವು ದಾಖಲಿಸಿ ಮಿಂಚಿದರು.
ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜಧಾರಿಯಾಗಿದ್ದ ಮೇರಿ ಕೋಮ್, ಭಾರತದ ಭರವಸೆಯಾಗಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್, ಬಹುತೇಕ ತಮ್ಮ ಕೊನೆಯ ಮಹಾಕ್ರೀಡಾಕೂಟದಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡುವ ಇರಾದೆಯಲ್ಲಿದ್ದಾರೆ.
ಮೂರು ಮಕ್ಕಳ ತಾಯಿಯೂ ಆಗಿರುವ 38 ವರ್ಷದ ಮೇರಿ, ದೇಶದ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.