ADVERTISEMENT

Tokyo Olympics | ಭಾರತದ ಆರ್ಚರಿ ಪುರುಷರ ತಂಡದ ಅಭಿಯಾನ ಅಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 6:38 IST
Last Updated 26 ಜುಲೈ 2021, 6:38 IST
ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್
ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್   

ಟೋಕಿಯೊ: ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಕೊರಿಯಾ ಎದುರು ಮುಗ್ಗರಿಸಿದ ಭಾರತದ ಆರ್ಚರಿ ಪುರುಷರ ತಂಡವು ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೋಮವಾರ ಆರ್ಚರಿ ಪುರುಷರ ತಂಡ ವಿಭಾಗದಲ್ಲಿ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್ ಅವರನ್ನೊಳಗೊಂಡ ಭಾರತ ತಂಡವು ಕೊರಿಯಾ ವಿರುದ್ಧ 0-6ರ ಅಂತರದಲ್ಲಿ ಸೋಲು ಅನುಭವಿಸಿದರು.

ಅಗ್ರ ಶ್ರೇಯಾಂಕಿತರಾದ ಕೊರಿಯಾದ ಕಿಮ್ ಜೆಡಾಕ್, ಜಿನ್ ಹಿಯಾಕ್ ಹಾಗೂ ಕಿಮ್ ವೂಜಿನ್ ವಿರುದ್ಧ ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ಭಾರತದ ತಂಡವು ನಿರಾಸೆಗೊಳಗಾಯಿತು.

ADVERTISEMENT

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಆರ್ಚರಿ ಪುರುಷರ ತಂಡವು ಇದಕ್ಕೂಮೊದಲು ಕಜಕಿಸ್ತಾನ ವಿರುದ್ಧ 6-2ರಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ತಂಡ ವಿಭಾಗದಲ್ಲಿ ಭಾರತದ ಪದಕದ ಕನಸು ಕಮರಿದೆ. ಈಗ ವೈಯಕ್ತಿಕ ವಿಭಾಗದಲ್ಲಿ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.