ADVERTISEMENT

Tokyo Olympics | ಕರ್ನಾಟಕದ ಗಣಪತಿ ಹಾಗೂ ವರುಣ್ ಜೋಡಿಗೆ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 9:49 IST
Last Updated 28 ಜುಲೈ 2021, 9:49 IST
ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್
ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್   

ಎನೊಶಿಮಾ: ಟೋಕಿಯೊ ಒಲಿಂಪಿಕ್ಸ್ ಸೇಲಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್ ಜೋಡಿಯು ನಾಲ್ಕು ರೇಸ್‌ಗಳ ಅಂತ್ಯಕ್ಕೆ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪುರುಷರ ಸ್ಕಿಫ್ 49ಇಆರ್ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತ ಜೋಡಿಯು ಮೊದಲ ಮೂರು ರೇಸ್‌ಗಳಲ್ಲಿ ಕ್ರಮವಾಗಿ 18, 17 ಹಾಗೂ 19ನೇ ಸ್ಥಾನ ಪಡೆಯಿತು.

ಎನೊಶಿಮಾ ಹಾಯಿದೋಣಿ ಬಂದರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ ಜೋಡಿಯಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರಲಿಲ್ಲ.

ಇನ್ನೂ ಎಂಟು ರೇಸ್ ಮತ್ತು ಪದಕ ಸುತ್ತಿನ ಸ್ಪರ್ಧೆ ಬಾಕಿ ಉಳಿದಿದೆ.

ಮಂಗಳವಾರದಂದು ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್ ಆರು ರೇಸ್‌ಗಳ ಬಳಿಕ ಅನುಕ್ರಮವಾಗಿ 22 ಹಾಗೂ 33ನೇ ಸ್ಥಾನ ಗಳಿಸಿದರು.

ಪುರುಷರ ಲೇಸರ್‌ ಸ್ಪರ್ಧೆಯಲ್ಲಿ ಸರವಣನ್‌ ಅವರು ಐದು ಮತ್ತು ಆರನೇ ರೇಸ್‌ಗಳಲ್ಲಿ ಕ್ರಮವಾಗಿ 23 ಮತ್ತು 22ನೇ ಸ್ಥಾನ ಗಳಿಸಿದರು. ಮಹಿಳೆಯರ ಲೇಸರ್‌ ರೇಡಿಯಲ್‌ ಸ್ಪರ್ಧೆಯಲ್ಲಿ ಕುಮನನ್ ಕ್ರಮವಾಗಿ 32 ಹಾಗೂ 38ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.