ADVERTISEMENT

Tokyo Olympics | 7 ಪದಕ, 48ನೇ ಸ್ಥಾನದೊಂದಿಗೆ ಭಾರತ ಶ್ರೇಷ್ಠ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2021, 6:28 IST
Last Updated 9 ಆಗಸ್ಟ್ 2021, 6:28 IST
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಸ್ಪರ್ಧಿಗಳು
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಸ್ಪರ್ಧಿಗಳು   

ಟೋಕಿಯೊ: ಕೋವಿಡ್ ಪಿಡುಗಿನ ನಡುವೆಯೂ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಭಾರತ ತನ್ನ ಇದುವರೆಗಿನ ಶ್ರೇಷ್ಠ ಸಾಧನೆಯನ್ನು ಮಾಡಿದೆ.

ಒಲಿಂಪಿಕ್ ಇತಿಹಾಸದಲ್ಲೇ ಕ್ರೀಡಾಕೂಟವೊಂದರಲ್ಲಿ ಭಾರತ ಅತಿ ಹೆಚ್ಚು ಏಳು ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಜಯಿಸಿತ್ತು.

ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದಾರೆ. ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತದ ಮೊಟ್ಟ ಮೊದಲ ಚಿನ್ನದ ಸಾಧನೆ ಇದಾಗಿದೆ.

ADVERTISEMENT

ಭಾರತಕ್ಕೆ 48ನೇ ಸ್ಥಾನ...
ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದಿರುವ ಭಾರತ ಒಟ್ಟಾರೆಯಾಗಿ 48ನೇ ಸ್ಥಾನ ಗಳಿಸಿದೆ.

ಚೀನಾ ಹಿಂದಿಕ್ಕಿದ ಅಮೆರಿಕ ನಂ.1, ಜಪಾನ್‌ ನಂ. 3...
ಅಂತಿಮ ದಿನದಲ್ಲಿ ಚೀನಾ ಹಿಂದಿಕ್ಕಿರುವ ಅಮೆರಿಕ ತಂಡವು, ಪದಕ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಗಳಿಸಿದೆ. ಅತ್ತ ಆತಿಥೇಯ ಜಪಾನ್, ಮೂರನೇ ಸ್ಥಾನಪಡೆದಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಪಟ್ಟಿ ಇಂತಿದೆ:

ಚಿನ್ನ:
ನೀರಜ್ ಚೋಪ್ರಾ (ಜಾವೆಲಿನ್ ಥ್ರೋ)

ಬೆಳ್ಳಿ:
ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್, 49 ಕೆ.ಜಿ),
ರವಿ ದಹಿಯಾ (ಕುಸ್ತಿ, 57 ಕೆ.ಜಿ).

ಕಂಚು:
ಪಿ.ವಿ. ಸಿಂಧು (ಬ್ಯಾಡ್ಮಿಂಟನ್),
ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್,69 ಕೆ.ಜಿ),
ಬಜರಂಗ್ ಪೂನಿಯಾ (ಕುಸ್ತಿ, 65 ಕೆ.ಜಿ),
ಪುರುಷರ ಹಾಕಿ.

ಚಿನ್ನ: 1, ಬೆಳ್ಳಿ: 2, ಕಂಚು: 4, ಒಟ್ಟು: 7

ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.