ಬೆಂಗಳೂರು: ಕರ್ನಾಟಕದ ಜಯದ್ ಆರವ್ ಸೇರಿದಂತೆ ಐವರು ಆಟಗಾರರು ಬಹರೇನ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಐಬಿಎಸ್‌ಎಫ್ ವಿಶ್ವ 17 ವರ್ಷದೊಳಗಿನವರ ಸ್ನೂಕರ್ ಚಾಂಪಿಯನ್‌ಷಿಪ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸಬ್ ಜೂನಿಯರ್ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಆರವ್ ಸಂಚೇತಿ (ಮಹಾರಾಷ್ಟ್ರ), ರಾಹುಲ್ ವಿಲಿಯಮ್ಸ್ (ತಮಿಳುನಾಡು), ವೈಭವ್ ಛಡ್ಡಾ (ತೆಲಂಗಾಣ) ಹಾಗೂ ಭವ್ಯಾ ಪಿ. (ಗುಜರಾತ್) ಚಾಂಪಿಯನ್‌ಷಿಷ್‌ನಲ್ಲಿ ಸ್ಪರ್ಧಿಸುವರು. ಅವರಿಗೆ ಅಶೋಕ್ ಶಾಂಡಿಲ್ಯ ಮಾರ್ಗದರ್ಶನ ನೀಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.