ADVERTISEMENT

ಚೆಸ್‌: ಗ್ರ್ಯಾಂಡ್‌ ಸ್ವಿಸ್‌ ಲೀಗ್‌ಗೆ ವಿದಿತ್‌

ಪಿಟಿಐ
Published 13 ಆಗಸ್ಟ್ 2021, 14:09 IST
Last Updated 13 ಆಗಸ್ಟ್ 2021, 14:09 IST
ಚೆಸ್‌– ಪ್ರಾತಿನಿಧಿಕ ಚಿತ್ರ
ಚೆಸ್‌– ಪ್ರಾತಿನಿಧಿಕ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಗುಜರಾತಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್ ಚೆಸ್‌ ಲೀಗ್‌ಗೆ ಅರ್ಹತೆ ಗಳಿಸಿದ್ದಾರೆ. ಲಾಟ್ವಿಯಾದ ರಿಗಾದಲ್ಲಿ ಅಕ್ಟೋಬರ್‌ 25ರಿಂದ ನವೆಂಬರ್ 8ರವರೆಗೆ ಈ ಟೂರ್ನಿ ನಡೆಯಲಿದೆ.

ನಾಸಿಕ್ ಮೂಲದ ವಿದಿತ್‌, ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್‌ನಲ್ಲಿ ಅಗ್ರ ಎಂಟರೊಳಗಿನ ಸ್ಥಾನ ಗಳಿಸುವ ಮೂಲಕ 2022ರ ಫಿಡೆ ಗ್ರ್ಯಾನ್ ಪ್ರಿಗೂ ಪ್ರವೇಶ ಗಿಟ್ಟಿಸಿದ್ದಾರೆ.

ಸೋಚಿಯಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಿದಿತ್‌ ಕ್ವಾರ್ಟರ್‌ಫೈನಲ್ ತಲುಪಿದ್ದರು. ಇದರೊಂದಿಗೆ ವಿಶ್ವನಾಥನ್ ಆನಂದ್ ಬಳಿಕ ಈ ಹಂತ ತಲುಪಿದ ಭಾರತದ ಆಟಗಾರ ಎನಿಸಿಕೊಂಡಿದ್ದರು.

ADVERTISEMENT

ಭಾರತದ ಒಟ್ಟು ನಾಲ್ವರು ಆಟಗಾರರು ಸ್ವಿಸ್‌ ಲೀಗ್‌ಗೆ ಅರ್ಹತೆ ಗಳಿಸಿದ್ದಾರೆ. ಇನ್ನುಳಿದ ಮೂವರೆಂದರೆ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆನಂದ್‌, ಪೆಂಟಾಲ ಹರಿಕೃಷ್ಣ ಮತ್ತು ಬಿ.ಅದಿಬನ್‌.

ಸ್ವಿಸ್‌ ಲೀಗ್‌ನಲ್ಲಿ ಒಟ್ಟು 114 ಆಟಗಾರರು ಕಾಣಿಸಿಕೊಳ್ಳಲಿದ್ದು, 11 ಸುತ್ತುಗಳ ಸ್ವಿಸ್ ಮಾದರಿಯಲ್ಲಿ ಟೂರ್ನಿ ಆಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.