
ಪಣಜಿ: ಫಿಡೆ ವಿಶ್ವಕಪ್‌ನ ಹೊಸ ಟ್ರೋಫಿಯನ್ನು ಶುಕ್ರವಾರ ಇಲ್ಲಿ ಅನಾವರಣಗೊಳಿಸಲಾಯಿತು. ಐದು ಬಾರಿಯ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಗೌರವ ಸಲ್ಲಿಸಲು ಈ ಟ್ರೋಫಿಗೆ ಅವರ ಹೆಸರಿಡಲಾಗಿದೆ.
ಫಿಡೆ ವಿಶ್ವಕಪ್‌ನ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಫಿಡೆ ಅಧ್ಯಕ್ಷ ಅರ್ಕಾಡಿ ದ್ವೊರಕೊವಿಚ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಟ್ರೋಫಿ ಅನಾವರಣ ನಡೆಯಿತು. ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಅವರೂ ಹಾಜರಿದ್ದರು.
‘ಫಿಡೆ ವಿಶ್ವಕಪ್ (ಓಪನ್) ವಿಜೇತ ತಂಡಕ್ಕೆ ನೀಡುವ ಟ್ರೋಫಿಗೆ, ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಹೆಸರು ಇಡಲು ಹೆಮ್ಮೆಯೆನಿಸುತ್ತದೆ’ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ ಅಧ್ಯಕ್ಷ ನಿತಿನ್ ನಾರಂಗ್ ಹೇಳಿದರು.
ಟೂರ್ನಿಯು 17.5 ಕೋಟಿ ಬಹುಮಾನ ಮೊತ್ತ ಹೊಂದಿದೆ. ಇಲ್ಲಿ ಭಾಗವಹಿಸುವ 22 ಆಟಗಾರರು 2700 ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ಪಡೆದಿದ್ದು, ಟೂರ್ನಿಯ ಗುಣಮಟ್ಟ ಹೆಚ್ಚಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.