ಮಹಾರಾಷ್ಟ್ರದ ಸರ್ವೇಶ್ ಅನಿಲ್ ಕುಶಾರೆ
ಕೃಪೆ: @ddsportschannel
ಟೋಕಿಯೊ: ಮಹಾರಾಷ್ಟ್ರದ ಸರ್ವೇಶ್ ಅನಿಲ್ ಕುಶಾರೆ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೈ ಜಂಪ್ ಸ್ಪರ್ಧೆಯಲ್ಲಿ ಭಾನುವಾರ ಫೈನಲ್ ಸುತ್ತು ಪ್ರವೇಶಿಸಿದರು.
30 ವರ್ಷ ವಯಸ್ಸಿನ ಕುಶಾರೆ ಅವರು 2.25 ಮೀ. ಎತ್ತರ ಜಿಗಿದು ಅಂತಿಮ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು. 2023ರ ಏಷ್ಯನ್ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತರೂ ಆಗಿರುವ ಕುಶಾರೆ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 2.27 ಮೀ. ಇದೆ. ಇವರು ಹೈಜಂಪ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದಾರೆ.
ಆದರೆ, ರಾಷ್ಟ್ರೀಯ ದಾಖಲೆ ಹೊಂದಿರುವ ಗುಲ್ವೀರ್ ಸಿಂಗ್ ಅವರು 10 ಸಾವಿರ ಮೀ. ಓಟದಲ್ಲಿ ಅಂತಿ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. 27 ವರ್ಷ ವಯಸ್ಸಿನ ಗುಲ್ವೀರ್ ಅವರು 29 ನಿಮಿಷ 13.33 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 11ನೇ ಸ್ಥಾನ ಪಡೆದರು.
ಗುಲ್ವೀರ್ ಅವರು ಸೆಪ್ಟೆಂಬರ್ 19ರಂದು ನಡೆಯುವ 5 ಸಾವಿರ ಮೀಟರ್ ಓಟದಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.