ನವದೆಹಲಿ: ಭಾರತದ ಮನೀಷ್ ರಾಥೋಡ್, ಹಿತೇಶ್ ಮತ್ತು ಅಭಿನಾಶ್ ಜಾಮವಾಲ್ ಅವರು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್ ಟೂರ್ನಿಯ ತಮ್ಮ ತಮ್ಮ ತೂಕ ವಿಭಾಗಗಳಲ್ಲಿ ಬುಧವಾರ ಸೆಮಿಫೈನಲ್ ತಲುಪಿದರು.
ಜಾಮವಾಲ್ 65 ಕೆ.ಜಿ. ವಿಭಾಗದಲ್ಲಿ ಸರ್ವಾನುಮತದ ತೀರ್ಪಿನಲ್ಲಿ ಜರ್ಮನಿಯ ಡೆನಿಸ್ ಬ್ರಿಲ್ ಅವರನ್ನು ಮಣಿಸಿದರೆ, ಹಿತೇಶ್ 70 ಕೆ.ಜಿ. ವಿಭಾಗದಲ್ಲಿ ಇಟಲಿಯ ಗೇಬ್ರಿಯಲ್ ಗಿಡಿ ರೊಂಟಾನಿ ಅವರನ್ನು ಸೋಲಿಸಿದರು.
55 ಕೆ.ಜಿ. ವಿಭಾಗದಲ್ಲಿ ರಾಥೋಡ್ ಭಿನ್ನತೀರ್ಪಿನ ಆಧಾರದಲ್ಲಿ ಪ್ಯಾರಿಸ್ ಒಲಿಂಪಿಯನ್, ಆಸ್ಟ್ರೇಲಿಯಾದ ಯೂಸುಫ್ ಚೊಥಿಯಾ ಅವರನ್ನು ಸೋಲಿಸಿದರು. ಮೂರನೇ ಸುತ್ತಿನವರೆಗೂ ತೀವ್ರ ಹಣಾಹಣಿ ಕಂಡುಬಂತು. ಮೂವರು ತೀರ್ಪುಗಾರರು ರಾಥೋಡ್ ಪರ ತೀರ್ಪು ನೀಡಿದರೆ, ಇಬ್ಬರು ತೀರ್ಪುಗಾರರು ರಾಥೋಡ್ ಮತ್ತು ಯೂಸುಫ್ ಅವರಿಗೆ ಸಮಾನ ಪಾಯಿಂಟ್ಸ್ ಕೊಟ್ಟರು.
ಸೆಮಿಫೈನಲ್‌ನಲ್ಲಿ ರಾಥೋಡ್, ಕಜಕಸ್ತಾನದ ನೂರ್‌ಸುಲ್ತಾನ್ ಅಲ್ತಿನ್ಬೆಕ್ ಅವರನ್ನು, ಹಿತೇಶ್, ಮಕಾನ್ ಟ್ರೋರ್ ಅವರನ್ನು, ಜಾಮವಾಲ್, ಇಟಲಯ ಗಿಯಾನ್‌ಲುಯಿಗಿ ಮಲಂಗ ಅವರನ್ನು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.