ADVERTISEMENT

ಏಷ್ಯನ್‌ ಕುಸ್ತಿ ಚಾಂ‍ಪಿಯನ್‌ಷಿಪ್‌: ಉದಿತ್‌, ದೀಪಕ್‌ಗೆ ಸ್ಥಾನ

ಪಿಟಿಐ
Published 12 ನವೆಂಬರ್ 2019, 19:45 IST
Last Updated 12 ನವೆಂಬರ್ 2019, 19:45 IST

ನವದೆಹಲಿ: ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಉದಿತ್‌ ಕುಮಾರ್‌ ಮತ್ತು ದೀಪಕ್‌ ಚಾಹಲ್‌ ಅವರು ಮಂಗಳವಾರ ಏಷ್ಯನ್‌ ಕುಸ್ತಿ ಚಾಂ‍ಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತದ 15 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಚಾಂಪಿಯನ್‌ಷಿಪ್‌ ಇದೇ ತಿಂಗಳ 22ರಿಂದ ತೈವಾನ್‌ನ ತೈಚುಂಗ್‌ ನಗರದಲ್ಲಿ ನಡೆಯಲಿದೆ.

ಲಖನೌ ಮತ್ತು ಸೋನೆಪತ್‌ನಲ್ಲಿ ನಡೆದಿದ್ದ ಟ್ರಯಲ್ಸ್‌ಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ 30 ಮಂದಿ ಬಾಲಕ ಮತ್ತು ಬಾಲಕಿಯರನ್ನು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ತಂಡಕ್ಕೆ ಆಯ್ಕೆ ಮಾಡಿದೆ.

ADVERTISEMENT

ತಂಡ ಇಂತಿದೆ: ಬಾಲಕರು; ಫ್ರೀಸ್ಟೈಲ್‌: ಯೋಗೇಶ್‌ (38 ಕೆ.ಜಿ), ಅಮನ್‌ (41 ಕೆ.ಜಿ), ರವಿ (44 ಕೆ.ಜಿ), ಆಕಾಶ್‌ (48 ಕೆ.ಜಿ), ಕಪಿಲ್‌ (52 ಕೆ.ಜಿ), ಉದಿತ್‌ (57 ಕೆ.ಜಿ), ವಿಶಾಲ್‌ (62 ಕೆ.ಜಿ), ಸಾಗರ್‌ (68 ಕೆ.ಜಿ), ದೀಪಕ್‌ ಚಾಹಲ್‌ (75 ಕೆ.ಜಿ), ಜತಿನ್‌ (85 ಕೆ.ಜಿ).

ಗ್ರೀಕೊ ರೋಮನ್‌: ಮಹಾದೇವ್‌ (38 ಕೆ.ಜಿ), ದಿನೇಶ್‌ (41 ಕೆ.ಜಿ), ಹರ್ಷ (44 ಕೆ.ಜಿ), ಹರಿಕೇಶ್‌ (48 ಕೆ.ಜಿ), ಅನಿಲ್‌ (52 ಕೆ.ಜಿ), ಸೋಹಿತ್‌ (57 ಕೆ.ಜಿ), ಸುಮಿತ್‌ (62 ಕೆ.ಜಿ), ಅಂಕಿತ್‌ (68 ಕೆ.ಜಿ), ಚಿರಾಗ್‌ (75 ಕೆ.ಜಿ) ಮತ್ತು ಅರ್ಷದೀಪ್‌ (85 ಕೆ.ಜಿ).

ಮಹಿಳೆಯರು: ಸಲೋನಿ (33 ಕೆ.ಜಿ), ಬಬ್ಲಿ (36 ಕೆ.ಜಿ), ಕೋಮಲಾ (39 ಕೆ.ಜಿ), ಕೋಮಲಾ (42 ಕೆ.ಜಿ), ಶೀತಲ್‌ (46 ಕೆ.ಜಿ), ಧನಶ್ರೀ (50 ಕೆ.ಜಿ), ಆರತಿ (54 ಕೆ.ಜಿ), ನೀತಿಕಾ (58 ಕೆ.ಜಿ), ದೀಪಿಕಾ (62 ಕೆ.ಜಿ) ಮತ್ತು ರಿಯಾ (66 ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.