ADVERTISEMENT

ಪಿಕಲ್‌ಬಾಲ್ ಚಾಂಪಿಯನ್‌ಷಿಪ್‌: ರಾಜೀವ್‌, ಅಂಜಲಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 20:06 IST
Last Updated 21 ನವೆಂಬರ್ 2025, 20:06 IST
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ಸೋನುಕುಮಾರ್‌ ವಿಶ್ವಕರ್ಮ ಅವರ ಆಟದ ವೈಖರಿ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿರುವ ಸೋನುಕುಮಾರ್‌ ವಿಶ್ವಕರ್ಮ ಅವರ ಆಟದ ವೈಖರಿ   

ಬೆಂಗಳೂರು: ಬಿಹಾರದ ರಾಜೀವ್‌ ಕುಮಾರ್‌ ಹಾಗೂ ಮಹಾರಾಷ್ಟ್ರದ ಅಂಜಲಿ ಪೋಳ್‌ ಅವರು ‘ವಿಶ್ವ ಪಿಕಲ್‌ಬಾಲ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಪಿಸಿ)– ಭಾರತ ಸರಣಿ’ಯ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಅಖಿಲ ಭಾರತ ಪಿಕಲ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆಯು (ಕೆಎಸ್‌ಪಿಎ) ಆಯೋಜಿಸಿರುವ ಈ ಟೂರ್ನಿಗೆ, ನಿರ್ಮಾಪಕ ಇ.ಕೃಷ್ಣಪ್ಪ ಅವರು ಶುಕ್ರವಾರ ಚಾಲನೆ ನೀಡಿದರು.

ಒಟ್ಟು ₹15 ಲಕ್ಷ ಬಹುಮಾನ ಮೊತ್ತ ಹೊಂದಿರುವ ಈ ಟೂರ್ನಿಯಲ್ಲಿ ವಿವಿಧ ವಯೋಮಿತಿಯ 480 ಆಟಗಾರರು ಭಾಗವಹಿಸಿದ್ದಾರೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವವರನ್ನು ಡಬ್ಲ್ಯುಪಿಸಿ ಫೈನಲ್‌ ಸುತ್ತಿನಲ್ಲಿ ಆಡುವ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಕೆಎಸ್‌ಪಿಎ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್‌ ತಿಳಿಸಿದರು.

ADVERTISEMENT

ಫಲಿತಾಂಶಗಳು: 14 ವರ್ಷದೊಳಗಿನ ಬಾಲಕರು: ಸಿಂಗಲ್ಸ್‌: ಆರಿಷ್‌ ಚೌಬೆ–1, ವಿರಾನ್ಶ್‌ ಚೋಪ್ರಾ–2, ಅಯ್ದೀನ್‌ ಫರೀದ್‌–3; ಡಬಲ್ಸ್‌: ದೇವಾಶಿಶ್‌ ಮಾಝಿ & ಆರಿಷ್‌ ಚೌಬೆ–1, ಆರ್ಯನ್‌ ಶಿವಂ & ಆಯ್ದೀನ್‌–2, ಜೈ ಭೂಟೊರಿಯಾ & ಹಿತ್ವಿಕ್‌ ವೈ.ಎಸ್‌.–3.

18 ವರ್ಷದೊಳಗಿನ ಬಾಲಕರು: ಸಿಂಗಲ್ಸ್‌: ರಾಜೀವ್‌ ಕುಮಾರ್‌ –1, ವಿರಾನ್ಶ್‌ –2, ಆಹಿಲ್‌ ಅಯಾಜ್‌ –3; ಡಬಲ್ಸ್‌: ಆಹಿಲ್‌ & ಅಯಾನ್‌ ಫರೀದ್‌ –1, ರಾಜೀವ್‌ & ಆದಿತ್ಯ –2, ನೇಹಲ್‌ ಸಿ. & ಆರಿಷ್‌ –3.

14 ವರ್ಷದೊಳಗಿನ ಬಾಲಕಿಯರು: ಸಿಂಗಲ್ಸ್‌: ಆಶ್ರಿತಾ ಎಸ್‌. –1, ಮಾನಸಿ ಕೆ. –2, ರುವಾನಾಶ್ರೀ –3.

18 ವರ್ಷದೊಳಗಿನ ಬಾಲಕಿಯರು: ಸಿಂಗಲ್ಸ್‌: ಅಂಜಲಿ –1, ಸ್ತುತಿ –2, ಕಾವ್ಯ ಎನ್‌. –3; ಡಬಲ್ಸ್‌: ಅಂಜಲಿ & ಸ್ತುತಿ –1, ಆರಾಧ್ಯ ಎಸ್‌. & ಕಾವ್ಯ ಎನ್‌. –2, ಆಶ್ರಿತಾ & ರುವಾನಾಶ್ರೀ –3.

14 ವರ್ಷದೊಳಗಿನ ಜೂನಿಯರ್‌ ಮಿಶ್ರ ಡಬಲ್ಸ್‌: ಮಾನಸಿ & ವಿರಾನ್ಶ್‌–1, ಅರಾಧ್ಯಾ & ಆರಿಷ್‌ –2, ಆರ್ಯನ್‌ & ಆಶ್ರಿತಾ –3.

14 ವರ್ಷದೊಳಗಿನ ಜೂನಿಯರ್‌ ಮಿಶ್ರ ಡಬಲ್ಸ್‌: ಅಂಜಲಿ & ಆದಿತ್ಯ ಗುಪ್ತಾ –1, ಕಾವ್ಯ & ಆರಿಷ್‌ –2, ರುವಾನಾಶ್ರೀ & ವಿರಾನ್ಶ್‌ –3.

60 ವರ್ಷ ಮೇಲ್ಪಟ್ಟ ಪುರುಷರು: ಸ್ಕಿಲ್‌ ಪಾಯಿಂಟ್ಸ್‌ 3.5: ರೆಜಿ ವರ್ಗೀಸ್‌ –1, ಜಯಕೃಷ್ಣ ವಿ. –2, ರಮೇಶ್‌ ರಾಜಮಣಿ –3; ಸ್ಕಿಲ್‌ ಪಾಯಿಂಟ್ಸ್‌ 5.0: ರೆಜಿ ವರ್ಗೀಸ್‌ –1, ಸುರೇಶ್‌ ಬಾಬು –2, ಹರೀಷ್‌ ಎ.ಪಿ. –3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.