ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬುಧವಾರ ನಡೆದ ಕುಸ್ತಿ ಸೆಮಿಫೈನಲ್ ಪಂದ್ಯದ ವೇಳೆ ಭಾರತೀಯ ಕುಸ್ತಿಪಟು ರವಿ ಕುಮಾರ್ ದಹಿಯಾ ಅವರನ್ನು ಎದುರಾಳಿ, ಕಜಕಸ್ತಾನದ ನೂರಿಸ್ಲಾಮ್ ಸನಾಯೆವ್ ಬಲವಾಗಿ ಕಚ್ಚಿದ್ದಾರೆ.
ತನ್ನನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಿರುವಾಗ ಸನಾಯೇವ್ ಅವರು ದಹಿಯಾ ಅವನ ತೋಳಿನ ಮೇಲೆ ಕಚ್ಚುತ್ತಿರುವ ವಿಡಿಯೊ, ಚಿತ್ರಗಳು ಈಗ ವೈರಲ್ ಆಗಿವೆ.
ಸೋಲಿನ ಅಂಚಿಂದ ಮೇಲೆದ್ದ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್ ತಲುಪಿದ್ದಾರೆ. ಸನಾಯೆವ್ ಅವರನ್ನು ಸೋಲಿಸುವ ಮೂಲಕ ಅವರು ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.