ನವದೆಹಲಿ: ಭಾರತದ 14 ಮಂದಿ ಬಾಕ್ಸರ್‌ಗಳು, ಚೀನಾದ ಶಿನ್‌ಜಾಂಗ್‌ನಲ್ಲಿ ನಡೆಯುತ್ತಿರುವ ಬೆಲ್ಟ್ ಆ್ಯಂಡ್ ರೋಡ್ ಇಂಟರ್‌ನ್ಯಾಷನಲ್ ಯೂತ್ ಬಾಕ್ಸಿಂಗ್ ಟೂರ್ನಿಯಲ್ಲಿ ಶುಕ್ರವಾರ ಫೈನಲ್ ತಲುಪಿದ್ದಾರೆ.
ಮೂರನೇ ವರ್ಷದ ಈ ಟೂರ್ನಿಯು 17, 19 ಮತ್ತು 23 ವರ್ಷದೊಳಗಿನವರ ವಿಭಾಗದಲ್ಲಿ ನಡೆಯುತ್ತದೆ. ಭಾರತವು 58 ಮಂದಿಯ ತಂಡವನ್ನು ಕಳುಹಿಸಿದೆ. ಭಾರತ 17 ವರ್ಷದೊಳಗಿನವರ ವಿಭಾಗದಲ್ಲಿ ಮಾತ್ರ ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದು, 20 ಬಾಲಕರು, 20 ಬಾಲಕಿಯರು, 12 ತರಬೇತುದಾರರು, ಐವರು ನೆರವು ಸಿಬ್ಬಂದಿ, ಒಬ್ಬರು ರೆಫ್ರಿ, ಒಬ್ಬರು ತೀರ್ಪುಗಾರ ಒಳಗೊಂಡಿದ್ದಾರೆ.
ಇವರಲ್ಲಿ 10 ಮಂದಿ ಬಾಲಕಿಯರ ವಿಭಾಗದಲ್ಲಿ, ನಾಲ್ವರು ಬಾಲಕರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಇರಾನ್, ಕೊರಿಯಾ, ಉಜ್ಬೇಕಿಸ್ತಾನ, ಫಿಲಿಪೀನ್ಸ್ ಮತ್ತು ಆತಿಥೇಯ ಚೀನಾದ ಸ್ಪರ್ಧಿಗಳೂ ಕಣದಲ್ಲಿದ್ದಾರೆ.
ಧ್ರುವ್ ಖಾರ್ಬ್ (46 ಕೆ.ಜಿ), ಫಲಕ್ (48 ಕೆ.ಜಿ), ಪೀಯುಷ್ (50 ಕೆ.ಜಿ) ಮತ್ತು ಉಧಾಮ್ ಸಿಂಗ್ ರಾಘವ್ ಅವರು ಫೈನಲ್ ತಲುಪಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ (46 ಕೆ.ಜಿ), ಖುಷಿ (46 ಕೆ.ಜಿ), ರಾಧಾಮಣಿ (60 ಕೆ.ಜಿ), ಚಂದ್ರಿಕಾ (54 ಕೆ.ಜಿ), ಜ್ಯೋತಿ (75 ಕೆ.ಜಿ) ಮತ್ತು ಅನುಷ್ಕಾ (+80 ಕೆ.ಜಿ) ಅವರು ಫೈನಲ್ ತಲುಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.