ADVERTISEMENT

ನಾಲ್ಕು ತಿಂಗಳಲ್ಲಿ 26 ಕೆ.ಜಿ.ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ

ತಾಯಂದಿರಿಗೆಲ್ಲ ಟೆನಿಸ್‌ ತಾರೆಯ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:30 IST
Last Updated 29 ಸೆಪ್ಟೆಂಬರ್ 2019, 19:30 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಒಂದು ಮಗುವಿನ ತಾಯಿಯಾದ ಮೇಲೆ ಮತ್ತೆ ವ್ಯಾಯಾಮ ಶಾಲೆಯ ಅಂಗಳಕ್ಕೆ ಇಳಿದಿದ್ದಾರೆ. ದೇಹವನ್ನು ಕಟೆಯಲು ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಬರೋಬರಿ 26 ಕೆ.ಜಿ. ತೂಕ ಇಳಿಸಿಕೊಂಡು, ನೋಡುಗರು ಬೆರಗಾಗುವಂತೆ ಮಾಡಿದ್ದಾರೆ.

ಇಷ್ಟೆಲ್ಲ ಬೆವರು ಇಳಿಸಿ, ತೂಕ ಕಳೆದುಕೊಳ್ಳಲು ಹಿಂದಿರುವ ಪ್ರೇರಕ ಶಕ್ತಿ ಮಾತ್ರ ಆರೋಗ್ಯಜೀವನಶೈಲಿಯತ್ತ ಇರುವ ತುಡಿತ. ಮದುವೆಯಾಗಿ, ಮಗುವಾದ ಮೇಲೆ ಹೆಣ್ಣುಮಕ್ಕಳ ಬದುಕು ಅಷ್ಟಕ್ಕೆ ಮುಗಿಯುವುದಿಲ್ಲ. ಆರೋಗ್ಯದ ಕಡೆಗೆ ಕಾಳಜಿವಹಿಸುವುದು ಮುಖ್ಯ ಎಂಬ ಸಂದೇಶವನ್ನೂ ಸಾರಿದ್ದಾರೆ.

‘ವ್ಯಾಯಾಮಕ್ಕೆ ದೇಹ ಹಾಗೂ ಮನಸ್ಸನ್ನು ತೊಡಗಿಸಿಕೊಳ್ಳುವ ಆ ದಿನಗಳು ಬಹಳ ಕಷ್ಟಕರವಾಗಿದ್ದವು. ಎಳೆ ಕೂಸಿನ ಆರೈಕೆ, ನಿದ್ರೆಯಿಲ್ಲದ ರಾತ್ರಿಗಳಿಂದಆಯಾಸಗೊಂಡಿದ್ದ ದೇಹ ಮತ್ತೆ ವ್ಯಾಯಾಮಕ್ಕೆ ಒಗ್ಗಿಕೊಳ್ಳುವುದಕ್ಕೆ ಕಷ್ಟಪಡುತ್ತಿತ್ತು. ಮೊದಲಿನ ಹಾಗೆ ವ್ಯಾಯಾಮಕ್ಕೆ ಸ್ಪಂದಿಸುತ್ತೇನಾ?, ಮತ್ತೆ ಆ ದೇಹದಾರ್ಢ್ಯ ಪಡೆಯಲು ಶಕ್ತಳಾಗುತ್ತೇನಾ?’ ಎಂದು ಪ್ರಶ್ನೆಗಳಿದ್ದವು. ಇವುಗಳ ನಡುವೆಯೇ ಎಡಬಿಡದೇ ವ್ಯಾಯಾಮದಲ್ಲಿ ತೊಡಗಿಸಿಕೊಂಡೆ. ಕ್ರಮೇಣ, ವ್ಯಾಯಾಮ ಮಾಡುವ ಕಲೆ, ಧಾಟಿ ಸುಧಾರಿಸಿತು. ಜತೆಗೆ ದೈಹಿಕ ಶಕ್ತಿಯನ್ನು ಪಡೆದುಕೊಂಡೆ’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ADVERTISEMENT

‘ಇವೆಲ್ಲವೂ ರಾತ್ರಿ ಬೆಳಗಾಗುವುದರೊಳಗೆ ನಡೆಯುವ ಸಂಗತಿಯಲ್ಲ’ ಎಂದು ವ್ಯಾಯಾಮಕ್ಕೆ ಬೇಕಾದ ದೃಢಮನಸ್ಸಿನ ಬಗ್ಗೆಯೂ ಹೇಳಿದ್ದಾರೆ.

‘ಪ್ರಸವದ ನಂತರ ದಿನಗಳಲ್ಲಿ ಆರೋಗ್ಯದೇಹವನ್ನು ಸಾಮುಗೊಳಿಸಿದ ಸಂಗತಿಗಳನ್ನು ದಾಖಲು ಮಾಡಿರುವುದಾಗಿ ಹೇಳಿಕೊಂಡಿರುವ ಅವರು, ದೇಹ ತೂಕ ಇಳಿಸಿಕೊಳ್ಳುವುದರ ಬಗ್ಗೆ ಹೇಗೆ, ಯಾವಾಗ, ಎಲ್ಲಿ ಎಂಬ ಪ್ರಶ್ನೆಗಳು ಕೇಳಲಾಗುತ್ತಿತ್ತು. ಅದಕ್ಕಾಗಿಯೇ ವ್ಯಾಯಾಮಾದ ಕೆಲವು ಸಂಗತಿಗಳನ್ನು ಬಹಿರಂಗೊಳಿಸಿರುವುದಾಗಿಯೂ ತಿಳಿಸಿದ್ದಾರೆ.

ಗರ್ಭಿಣಿಯಾಗಿದ್ದಾಗ 23 ಕೆ.ಜಿ.ಯಷ್ಟು ತೂಕ ಏರಿಸಿಕೊಂಡಿದ್ದ ಸಾನಿಯಾ ಶ್ರದ್ಧೆ ಹಾಗೂ ಶಿಸ್ತಿನಿಂದ ವ್ಯಾಯಾಮದಲ್ಲಿ ತೊಡಗಿಕೊಂಡಿದ್ದರ ಫಲನಾಲ್ಕು ತಿಂಗಳಲ್ಲಿ 26 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ‘ಮಗುವಿನ ತಾಯಿಯಾದ ಮೇಲೆ ಬಹುತೇಕ ಹೆಣ್ಣುಮಕ್ಕಳಿಗೆ ಸಮಯವೆಂಬುದುದುಬಾರಿಯಾಗುತ್ತದೆ. ಅದರಲ್ಲೂ ಎಂದಿನಂತೆ ಸಹಜವಾಗಿ ಇರಲು ಕಷ್ಟವಾಗುತ್ತದೆ. ಮಗು ಮತ್ತು ಮನೆಯ ಆರೈಕೆಯಲ್ಲಿ ಕಳೆದುಹೋಗುವ ತಾಯಂದಿರು ಗಮನಿಸಬೇಕು; ನಾನೇ ಮನಸ್ಸು ಮಾಡಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗಿರುವಾಗ, ನಿಮಗೂ ಸಾಧ್ಯವಿದೆ. ದಿನಕ್ಕೆ ನಿಮಗಾಗಿ ಒಂದರಿಂದ ಎರಡು ಗಂಟೆಗಳನ್ನು ಮೀಸಲಿಡಿ. ಇದು ದೇಹದ ದೃಷ್ಟಿಯಿಂದ ಅಷ್ಟೆ ಅಲ್ಲ ಮನಸ್ಸಿನ ಆರೋಗ್ಯಕ್ಕೂಉತ್ತಮ’ ಎಂಬ ಸಲಹೆಯನ್ನೂ ನೀಡಿದ್ದಾರೆ.

ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟರ್‌ ಶೋಯಬ್‌ ಮಲಿಕ್‌ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಬಳಿಕ 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್‌ನಲ್ಲಿ ಕೊನೆಯ ಬಾರಿ ಆಟವಾಡಿದ್ದರು. ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿ, ಇಜಾನ್‌ ಮಿರ್ಜಾ ಮಲಿಕ್‌ ಎಂದು ಹೆಸರಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.