ADVERTISEMENT

ಎಲೀಟ್‌ ಆಟಗಾರರ ತರಬೇತಿಗೆ ಎಐಟಿಎ ಚಿಂತನೆ

ಪಿಟಿಐ
Published 2 ನವೆಂಬರ್ 2020, 14:46 IST
Last Updated 2 ನವೆಂಬರ್ 2020, 14:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮುಂದಿನ ವರ್ಷದಿಂದ ಆಟಗಾರರನ್ನು ಸ್ಪರ್ಧಾತ್ಮಕ ಟೆನಿಸ್‌ಗೆ ಸಜ್ಜುಗೊಳಿಸುವ ಉದ್ದೇಶದಿಂದ ಅಖಿಲ ಭಾರತ ಟೆನಿಸ್‌ ಸಂಸ್ಥೆಯು (ಎಐಟಿಎ) ಎಲೀಟ್‌ ಪ‍ಟುಗಳಿಗೆ ತರಬೇತಿ ಶಿಬಿರ ಆಯೋಜಿಸಲು ಚಿಂತನೆ ನಡೆಸಿದೆ.

ಅಗ್ರ ಕ್ರಮಾಂಕದ 20 ಎಲೀಟ್‌ ಪುರುಷ ಹಾಗೂ ಮಹಿಳಾ ಪಟುಗಳಿಗಾಗಿ ದೆಹಲಿ ಲಾನ್‌ ಟೆನಿಸ್‌ ಸಂಸ್ಥೆಯ(ಡಿಎಲ್‌ಟಿಎ) ಆವರಣದಲ್ಲಿ ತರಬೇತಿ ಶಿಬಿರ ನಡೆಸಲು ಯೋಜನೆ ರೂಪಿಸಿದೆ. ಈ ಆಟಗಾರರ ಮಧ್ಯೆ ಜೀವಸುರಕ್ಷಾ ವಾತಾವರಣದಲ್ಲಿ ರಾಷ್ಟ್ರೀಯ ಸಿಂಗಲ್ಸ್ ವಿಭಾಗದ ಚಾಂಪಿಯನ್‌ಷಿಪ್‌ ನಡೆಸಿ, ಶಿಬಿರವನ್ನು ಕೊನೆಗೊಳಿಸುವ ಇರಾದೆಯನ್ನು ಹೊಂದಿದೆ.

ನವೆಂಬರ್ 30ರಂದು ಪುರುಷ ಆಟಗಾರರ ಶಿಬಿರ ಆರಂಭವಾಗಲಿದೆ. ಜನವರಿ 4ರಿಂದ ಮಹಿಳೆಯರಿಗಾಗಿ ಶಿಬಿರ ನಡೆಯಲಿದೆ.

ADVERTISEMENT

ಭಾರತದ ಡೇವಿಸ್‌ ಕಪ್‌ ಕೋಚ್‌ ಜೀಶಾನ್‌ ಅಲಿ ಮೇಲ್ವಿಚಾರಣೆಯಲ್ಲಿ ಶಿಬಿರ ನಡೆಯಲಿದೆ. ತರಬೇತಿ ಶಿಬಿರಗಳ ಹೈ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ ಅವರು ಈ ಶಿಬಿರದ ಕಾರ್ಯಯೋಜನೆ ರೂಪಿಸಲಿದ್ದಾರೆ. ಕೋಚ್‌ಗಳು, ಫಿಟ್‌ನೆಸ್‌ ತರಬೇತುದಾರರುಅವರಿಗೆ ನೆರವು ನೀಡಲಿದ್ದಾರೆ.

‘ನಮ್ಮ ಆಟಗಾರರು ಅಂತರರಾಷ್ಟ್ರೀಯ ಟೂರ್ನಿಗಳಿಗೆ ಸಿದ್ಧರಾಗಬೇಕೆಂದು ನಾವು ಬಯಸುತ್ತೇವೆ. ಕೋವಿಡ್‌–19 ಕಾರಣದಿಂದ ಈ ವರ್ಷ ಹಲವು ಚಾಂಪಿಯನ್‌ಶಿಪ್‌ಗಳನ್ನು ರದ್ದುಗೊಳಿಸಬೇಕಾದ್ದರಿಂದ, ಶಿಬಿರದ ಕೊನೆಯ ವಾರವನ್ನು ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿ ಪರಿವರ್ತಿಸಬಹುದೇ ಎಂಬುದರ ಕುರಿತು ಯೋಚಿಸುತ್ತಿದ್ದೇವೆ‘ ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.