ADVERTISEMENT

ಮ್ಯಾಚ್‌ ಫಿಕ್ಸಿಂಗ್‌ ಆರೋಪ ಸಾಬೀತು: ಮಟೋಸ್‌ಗೆ ಆಜೀವ ನಿಷೇಧ

ಏಜೆನ್ಸೀಸ್
Published 10 ಸೆಪ್ಟೆಂಬರ್ 2019, 20:21 IST
Last Updated 10 ಸೆಪ್ಟೆಂಬರ್ 2019, 20:21 IST
ಡಿಗೊ ಮಟೋಸ್‌– ಟ್ವಿಟರ್‌ ಚಿತ್ರ
ಡಿಗೊ ಮಟೋಸ್‌– ಟ್ವಿಟರ್‌ ಚಿತ್ರ   

ಲಂಡನ್‌: ಮ್ಯಾಚ್ ಫಿಕ್ಸಿಂಗ್‌ ಆರೋಪ ಸಾಬೀತಾದ ಕಾರಣ ಬ್ರೆಜಿಲ್‌ ಟೆನಿಸ್‌ ಆಟಗಾರ ಡಿಗೊ ಮಟೋಸ್‌ಗೆ ಸೋಮವಾರ ಆಜೀವ ನಿಷೇಧ ಹೇರಲಾಗಿದೆ. ಅವರಿಗೆ ₹ 89,75,141 (1,25,000 ಡಾಲರ್‌) ದಂಡವನ್ನೂ ವಿಧಿಸಲಾಗಿದೆ.

2018ರಲ್ಲಿ ಬ್ರೆಜಿಲ್‌, ಶ್ರೀಲಂಕಾ, ಈಕ್ವೆಡಾರ್‌, ಪೋರ್ಚುಗಲ್‌ ಹಾಗೂ ಸ್ಪೇನ್‌ಗಳಲ್ಲಿ ಆಡಿದ್ದ ಐಟಿಎಫ್‌ ಮಟ್ಟದ 10 ಟೂರ್ನಿಗಳ ಫಲಿತಾಂಶವನ್ನು ಮಟೋಸ್‌ ಫಿಕ್ಸ್ ಮಾಡಿಕೊಂಡಿದ್ದರು ಎಂದು ಭ್ರಷ್ಟಾಚಾರ ವಿರೋಧಿ ಘಟಕದ ವಿಚಾರಣೆಯಲ್ಲಿ ತಿಳಿದುಬಂದಿದೆ. 31 ವರ್ಷದ ಆಟಗಾರ ಟೆನಿಸ್‌ ಸಮಗ್ರತಾ ಘಟಕದ (ಟಿಐಯು) ವಿಚಾರಣೆಗೂ ಸಹಕರಿಸಿರಲಿಲ್ಲ. ವಿಧಿವಿಜ್ಞಾನ ಪರೀಕ್ಷೆಗಾಗಿ ಮೊಬೈಲ್‌ ಫೋನ್‌ ಹಾಗೂ ಹಣಕಾಸು ದಾಖಲೆಗಳನ್ನು ಒದಗಿಸಲು ಆತ ನಿರಾಕರಿಸಿದ್ದ.

ಮಟೋಸ್‌, ಈಕ್ವೆಡಾರ್‌ ಟೂರ್ನಿಯಲ್ಲಿ ಪಡೆದ ಬಹುಮಾನದ ಮೊತ್ತವನ್ನು ಮರುಪಾವತಿಸಲು ಆದೇಶಿಸಲಾಗಿದೆ. 2018ರ ಡಿಸೆಂಬರ್‌ನಿಂದ ಆತನನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.