ಡೇವಿಸ್ ಕಪ್: ಭಾರತೀಯ ಆಟಗಾರರ ಸಂಭ್ರಮ
(ಚಿತ್ರ ಕೃಪೆ: ಡಿಡಿ ಸ್ಪೋರ್ಟ್ಸ್
ಬೀಲ್ (ಸ್ವಿಜರ್ಲೆಂಡ್): ಇದೇ ಮೊದಲ ಬಾರಿಗೆ ಡೇವಿಸ್ ಕಪ್ ಕ್ವಾಲಿಫೈಯರ್ಸ್‌ಗೆ (1R) ಭಾರತ ದಾಪುಗಾಲು ಇಟ್ಟಿದೆ.
ಡೇವಿಸ್ ಕಪ್ ವಿಶ್ವಗುಂಪಿನ (1) ಪಂದ್ಯದಲ್ಲಿ ಸ್ವಿಜರ್ಲೆಂಡ್ ತಂಡವನ್ನು ಭಾರತ 3–1ರ ಅಂತರದಿಂದ ಮಣಿಸಿತು.
ಯುವ ಆಟಗಾರ ಹೆನ್ರಿ ಬೆರ್ನೆಟ್ ವಿರುದ್ಧದ ಪಂದ್ಯದಲ್ಲಿ ನಗಾಲ್ 6–1, 6–3ರ ಅಂತರದ ಗೆದ್ದು ಬೀಗಿದರು.
ಈ ಸಂದರ್ಭದಲ್ಲಿ ಭಾರತೀಯ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲಾಡಿದರು. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
32 ವರ್ಷಗಳ ಬಳಿಕ ತವರಿನಾಚನೆ ಯುರೋಪಿನ ತಂಡವೊಂದರ ವಿರುದ್ಧ ಭಾರತಕ್ಕೆ ದೊರಕಿದ ಮೊದಲ ಜಯ ಇದಾಗಿದೆ. ಭಾರತ ಕೊನೆಯದಾಗಿ 1993ರಲ್ಲಿ ಫ್ರಾನ್ಸ್ ವಿರುದ್ಧ ಅವರದ್ದೇ ನೆಲದಲ್ಲಿ ಗೆಲುವು ದಾಖಲಿಸಿತ್ತು.
ಇನ್ನು ತವರಿನ ನೆಲದ ಪೈಕಿ 2022ರಲ್ಲಿ ದೆಹಲಿಯಲ್ಲಿ ಡೆನ್ಮಾರ್ಕ್ ವಿರುದ್ದ ಗೆಲುವು ಸಾಧಿಸಿತ್ತು.
ಡೇವಿಸ್ ಕಪ್ ಕ್ವಾಲಿಫೈಯರ್ಸ್‌ನ ಮೊದಲ ಸುತ್ತಿನ ಪಂದ್ಯವು 2026ರ ಜನವರಿಯಲ್ಲಿ ಆರಂಭವಾಗಲಿದೆ.
ಮೊದಲ ದಿನವಾದ ಶುಕ್ರವಾರ ದಕ್ಷಿಣೇಶ್ವರ ಸುರೇಶ್ ಮತ್ತು ಸುಮಿತ್ ನಗಾಲ್ ಸಿಂಗಲ್ಸ್ ಪಂದ್ಯಗಳನ್ನು ಗೆದ್ದು ಭಾರತಕ್ಕೆ 2–0 ಮುನ್ನಡೆ ಒದಗಿಸಿದ್ದರು.
ಆದರೆ ಎರಡನೇ ದಿನವಾದ ಶನಿವಾರ ಡಬಲ್ಸ್‌ನಲ್ಲಿ ಶ್ರೀರಾಮ್ ಬಾಲಾಜಿ ಮತ್ತು ರಿತ್ವಿಕ್ ಬೊಲ್ಲಿಪಲ್ಲಿ ಜೋಡಿ ಸೋಲು ಕಂಡಿದ್ದರು.
ಆದರೆ ನಿರ್ಣಾಯಕ ಸಿಂಗಲ್ಸ್‌ನಲ್ಲಿ ಗೆಲುವಿನ ನಗೆ ಬೀರಿದ ನಗಾಲ್, ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.