ADVERTISEMENT

ಪಾಕ್‌ ವಿರುದ್ಧ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

ಸೆ. 14, 15ರಂದು ನಡೆಯಬೇಕಿದ್ದ ಪಂದ್ಯ ನವೆಂಬರ್‌ಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:46 IST
Last Updated 22 ಆಗಸ್ಟ್ 2019, 19:46 IST
   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಇಸ್ಲಾಮಾಬಾದ್‌ನಲ್ಲಿ ಸೆಪ್ಟೆಂಬರ್‌ 14 ಮತ್ತು 15ರಂದು ನಡೆಯಬೇಕಾಗಿದ್ದ ಡೇವಿಸ್‌ ಕಪ್‌ ಪಂದ್ಯವನ್ನು ನವೆಂಬರ್‌ಗೆ ಮುಂದೂಡಲಾಗಿದೆ. ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌), ಭದ್ರತಾ ವ್ಯವಸ್ಥೆ ಪರಾಮರ್ಶೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ.

‘ವಿಶೇಷ ಸಂದರ್ಭ’ವೆಂದು ಪರಿಗಣಿಸಿ ಏಷ್ಯಾ–ಒಷಾನಿಯಾ ವಲಯದ ಒಂದನೇ ಗುಂಪಿನ ಈ ಪಂದ್ಯವನ್ನು ಮುಂದೂಡಲಾಗಿದೆ ಎಂದು ಐಟಿಎಫ್‌ ಹೇಳಿಕೆಯೊಂದರಲ್ಲಿ ತಿಳಿಸಿದೆ.ಪಂದ್ಯದ ಪರಿಷ್ಕೃತ ದಿನಾಂಕವನ್ನು ಸೆ.9ಕ್ಕೆ ಮೊದಲು ನಿಗದಿಪಡಿಸಲಾಗುವುದು.

‘ಇದೊಂದು ಅಸಾಧಾರಣ ಸಂದರ್ಭ. ಆಟಗಾರರ, ಅಧಿಕಾರಿಗಳ ಮತ್ತು ಪ್ರೇಕ್ಷಕರ ಸುರಕ್ಷೆ ಐಟಿಎಫ್‌ನ ಮೊದಲ ಆದ್ಯತೆ’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.