ADVERTISEMENT

ಡೇವಿಸ್‌ ಕಪ್‌: ಭಾರತದ ಆಸೆ ಜೀವಂತ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 20:00 IST
Last Updated 7 ಮಾರ್ಚ್ 2020, 20:00 IST

ಜಾಗ್ರೆಬ್‌, ಕ್ರೊವೇಷ್ಯಾ: ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್ಸ್‌ ಹಂತಕ್ಕೇರುವ ಭಾರತದ ಕನಸು ಜೀವಂತವಾಗಿದೆ.

ಶನಿವಾರ ನಡೆದ ಕ್ರೊವೇಷ್ಯಾ ಎದುರಿನ ಅರ್ಹತಾ ಹಂತದ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಮೋಡಿ ಮಾಡಿದ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ, ತಂಡಕ್ಕೆ ಚೈತನ್ಯ ತುಂಬಿದರು.

ಶುಕ್ರವಾರ ನಡೆದಿದ್ದ ಸಿಂಗಲ್ಸ್‌ ಪಂದ್ಯಗಳಲ್ಲಿ ಗೆದ್ದಿದ್ದ ಕ್ರೊವೇಷ್ಯಾ 2–0 ಮುನ್ನಡೆ ಗಳಿಸಿತ್ತು. ಹೀಗಾಗಿ ಡಬಲ್ಸ್‌ನಲ್ಲಿ ಭಾರತ ಗೆಲ್ಲಲೇಬೇಕಿತ್ತು.

ADVERTISEMENT

ಡಾಮ್‌ ಸ್ಪೊರ್ಟೊವಾ ಅಂಗಳದಲ್ಲಿ ನಡೆದ ಹೋರಾಟದಲ್ಲಿ ಪೇಸ್‌ ಮತ್ತು ಬೋಪಣ್ಣ 6–3, 6–7, 7–5ರಲ್ಲಿ ಮೇಟ್‌ ಪೇವಿಕ್‌ ಮತ್ತು ಫ್ರಾಂಕೊ ಸ್ಕುಗರ್‌ ಅವರನ್ನು ಸೋಲಿಸಿ ಹಿನ್ನಡೆಯನ್ನು1–2ಕ್ಕೆ ತಗ್ಗಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ 6–3, 4–6, 2–6ರಲ್ಲಿ ಬೊರ್ನಾ ಗೋಜೊ ಎದುರೂ, ರಾಮಕುಮಾರ್‌ ರಾಮನಾಥನ್‌ 6–7, 6–7ರಲ್ಲಿ ಮರಿನ್‌ ಸಿಲಿಕ್‌ ಮೇಲೂ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.