
ಪಿಟಿಐ
ಟೆನಿಸ್
ನವದೆಹಲಿ: 2026ರ ಬಿಲ್ಲಿ ಜೀನ್ ಕಿಂಗ್ ಕಪ್ ಏಷ್ಯಾ– ಒಷಾನಿಯಾ ವಲಯದ ಟೂರ್ನಿಯ ಆತಿಥ್ಯವನ್ನು ಭಾರತಕ್ಕೆ ವಹಿಸಲಾಗಿದೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಗುರುವಾರ ತಿಳಿಸಿದೆ.
ಬಿಲ್ಲಿ ಜೀನ್ ಕಿಂಗ್ ಕಪ್, ಮಹಿಳಾ ಟೆನಿಸ್‌ನ ವಿಶ್ವಕಪ್ ಎನಿಸಿದೆ. ನವೀಕೃತಗೊಂಡಿರುವ ಡೆಲ್ಲಿ ಲಾನ್ ಟೆನಿಸ್ ಸಂಸ್ಥೆಯ ಅಂಕಣಗಳಲ್ಲಿ ಏಪ್ರಿಲ್ 7 ರಿಂದ11 ರವರೆಗೆ ಈ ಸ್ಪರ್ಧೆ ನಡೆಯಲಿದೆ ಎಂದು ಎಐಟಿಎ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಪ್ಲೇ ಆಫ್‌ಗೆ ಬಡ್ತಿ ಪಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.