ADVERTISEMENT

ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ನಿ: ಶ್ರೀವಲ್ಲಿ, ಸ್ಮೃತಿ ಶುಭಾರಂಭ

ಮೋಹನ್ ಕುಮಾರ ಸಿ.
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ಮೈಸೂರಿನ ಎಂಟಿಸಿ ಅಂಗಳದಲ್ಲಿ ಮಂಗಳವಾರ ನಡೆದ ಐಟಿಎಫ್ ಮಹಿಳಾ ಟೆನಿಸ್ ಟೂರ್‌ ಟೂರ್ನಿಯಲ್ಲಿ ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರ ಆಟದ ವೈಖರಿ </p></div>

ಮೈಸೂರಿನ ಎಂಟಿಸಿ ಅಂಗಳದಲ್ಲಿ ಮಂಗಳವಾರ ನಡೆದ ಐಟಿಎಫ್ ಮಹಿಳಾ ಟೆನಿಸ್ ಟೂರ್‌ ಟೂರ್ನಿಯಲ್ಲಿ ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರ ಆಟದ ವೈಖರಿ

   

– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಹಾಗೂ ಸ್ಮೃತಿ ಭಾಸಿನ್ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳೆಯರ ವಿಶ್ವ ಟೆನಿಸ್‌ ಟೂರ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ADVERTISEMENT

ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ)ನಲ್ಲಿ ಮಂಗಳವಾರ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀವಲ್ಲಿ 7–5, 6–1 ರಿಂದ ಭಾರತದವರೇ ಆದ ಸೋನಾಲ್ ಪಾಟೀಲ್‌ ಅವರನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 

‍ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಟವಾಡಿದ ಶ್ರೀವಲ್ಲಿ ಮೊದಲ ಸೆಟ್‌ನಲ್ಲಿ 3–0ರಿಂದ ಮುಂದಿದ್ದರು. ಈ ವೇಳೆ ಸೋನಾಲ್‌ ತಿರುಗೇಟು ನೀಡಿದರು. ಎರಡನೇ ಸೆಟ್‌ನಲ್ಲಿ ಶ್ರೀವಲ್ಲಿ ಪಾರಮ್ಯ ಸಾಧಿಸಿದರು. 

ಸ್ಮೃತಿ ಭಾಸಿನ್ ನ್ಯೂ ಕ್ಯಾಲಿಡೊನಿಯಾದ ಐದನೇ ಶ್ರೇಯಾಂಕಿತ ಆಟಗಾರ್ತಿ ಕ್ಯಾರೊಲಾನ್ ಡೆಲಾವನ್ನಾಯ್ ಅವರನ್ನು 4–6, 6–0, 6–2ರಿಂದ ಸೋಲಿಸಿದರು.

ಡಬಲ್ಸ್‌ನಲ್ಲಿ ಕರ್ನಾಟಕದ ಸೋಹಾ ಸಾದಿಕ್ ಹಾಗೂ ಆಕಾಂಕ್ಷಾ ನಿಟ್ಟುರೆ ಜೋಡಿ 6–0, 6–1ರಿಂದ ಕಶ್ವಿ ಸುನಿಲ್ ಹಾಗೂ ಅರ್ಜಾನ್‌ ಖರೊಕಿವಾಲಾ ವಿರುದ್ಧ ಗೆಲುವು ಪಡೆಯಿತು.

ಫಲಿತಾಂಶ: ಸಿಂಗಲ್ಸ್: ಡೆನ್ಮಾರ್ಕ್‌ನ ಎಲಿನಾ ಜಾಮ್‌ಶಿದಿ 6–1, 6–1ರಿಂದ ವಂಶಿತಾ ಪಠಾನಿಯಾ ಎದುರು, ಆಕಾಂಕ್ಷಾ ನಿಟ್ಟುರೆ 6–3, 6–1ರಿಂದ ದಿವಾ ಭಾಟಿಯಾ ಎದುರು, ಅಮೆರಿಕದ ಜೆಸ್ಸಿ ಆ್ಯನೆ 6–2, 6–0ರಿಂದ ಅಂಜಲಿ ರಾಠೆ ಎದುರು, ಹುಮೆರಾ ಬಹರ್ಮಸ್‌ 7–5, 6–4ರಿಂದ ಅಮೋದಿನಿ ನಾಯಕ್ ಎದುರು, ಅಮೆರಿಕದ ಶ್ರೀಯಾ ಅತ್ತೂರು 6–1 ಎದುರು, 6–3ರಿಂದ ಪಾವನಿ ಪಾಠಕ್ ಎದುರು, ಶಹಿರಾ ಸಿಂಗ್‌  6–2, 6–1ರಿಂದ ನೇಪಾಳದ ಅಭಿಲಾಷಾ ಬಿಸ್ಟ ಎದುರು ಜಯ.

ಡಬಲ್ಸ್: ರಷ್ಯಾದ ಪೊಲಿನಾ ಕೈಬೆಕೊವಾ– ರಾಲಿನಾ ಕಲಿಮುಲ್ಲಿನ 6-2, 6-2ರಿಂದ ಕಾಶಿಶ್‌ ಭಾಟಿಯಾ– ಸೌಮ್ಯಾ ವೈಗ್ ಎದುರು, ಅಮೆರಿಕದ ಜೆಸ್ಸಿ ಆ್ಯನೆ– ರಿಯಾ ಭಾಟಿಯಾ 6-3, 6-2ರಿಂದ ಶ್ರೀಯಾ ಅತ್ತೂರು– ಅಂಜಲಿ ರಾಠಿ ಎದುರು, ಸೋಹಾ ಸಾದಿಕ್‌– ಆಕಾಂಕ್ಷಾ ನಿಟ್ಟುರೆ 6-0, 6-1ರಿಂದ ಕಾಶ್ವಿ ಸುನಿಲ್‌– ಅರ್ಜಾನ್‌ ಖರೊಕಿವಾಲಾ ಎದುರು, ಶ್ರಾವ್ಯ ಶಿವಾನಿ ಚಿಲಕಲ‍ಪುಡಿ– ಕ್ಯಾರೊಲಾನ್ ಡೆಲಾವನ್ನಾಯ್ 7-6, 6-3ರಿಂದ ಶ್ರೀನಿಧಿ ಬಾಲಾಜಿ– ಹರ್ಷಿನಿ ನಾಗರಾಜ್ ಎದುರು ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.