ಬೆಂಗಳೂರು: ನಗರದ ಸುರಾನ ಕಾಲೇಜು ವಿದ್ಯಾರ್ಥಿ ಬಿ.ಆರ್.ನಿಕ್ಷೇಪ್ ಇಲ್ಲಿನ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಎಐಟಿಎ ರಾಷ್ಟ್ರೀಯ ರ‍್ಯಾಂಕಿಂಗ್ ಪುರುಷರ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.
ಗುರುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ನಿಕ್ಷೇಪ್ ಕರ್ನಾಟಕದವರೇ ಆದ ಮನೀಷ್ ಜಿ ಅವರನ್ನು 7-5, 7-6(7-5)ರಲ್ಲಿ ಮಣಿಸಿದರು. ಸೆಮಿಫೈನಲ್‌ನಲ್ಲಿ ಅವರು ಗುಜರಾತ್‌ನ ಮಧ್ವಿನ್ ಕಾಮತ್ ಅವರನ್ನು ಎದುರಿಸುವರು. ಮಧ್ವಿನ್ ಕರ್ನಾಟಕದ ಮಾನವ್ ಜೈನ್ ವಿರುದ್ಧ 6-1, 3-6, 6-3ರಲ್ಲಿ ಜಯ ಗಳಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.
ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಕರ್ನಾಟಕದ ಋಷಿ ರೆಡ್ಡಿ ತಮಿಳುನಾಡಿನ ಕವಿನ್ ಮಾಸಿಲಮಣಿ ಎದುರು 7-6(11-9), 2-0ರಲ್ಲಿ ಗೆದ್ದರು. ಎರಡನೇ ಸೆಟ್‌ನ ನಡುವೆ ಕವಿನ್ ನಿವೃತ್ತರಾದರು. ತೆಲಂಗಾಣದ ತರುಣ್ ಅನಿರುದ್ಧ ತಮಿಳುನಾಡಿನ ಭರತ್ ನಿಶೋಕ್ ಅವರನ್ನು 7-6(7-4), 7-6(7-5)ರಲ್ಲಿ ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.