ನೊವಾಕ್ ಜೊಕೊವಿಚ್
(ಚಿತ್ರ ಕೃಪೆ: X/@rolandgarros)
ಪ್ಯಾರಿಸ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಹುಡುಕಾಟದಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್, ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕಿತ ಜೊಕೊವಿಚ್ ಅವರು ಆಸ್ಟ್ರೀಯಾದ ಫಿಲಿಪ್ ಮಿಸೋಲಿಕ್ ವಿರುದ್ಧ 6-3, 6-4, 6-2ರ ನೇರ ಸೆಟ್‌ಗಳಲ್ಲಿ ಗೆದ್ದು ಪ್ರಿ-ಕ್ವಾರ್ಟರ್‌ಗೆ ಮುನ್ನಡೆದಿದ್ದಾರೆ.
ಇದರೊಂದಿಗೆ ಮೂರು ಬಾರಿಯ ಚಾಂಪಿಯನ್ ಜೊಕೊವಿಚ್, ರಾಲೆಂಡ್ ಗ್ಯಾರೋಸ್ ಅಂಗಣದಲ್ಲಿ 99 ಗೆಲುವುಗಳ ಸಾಧನೆ ಮೆರೆದಿದ್ದಾರೆ.
2016, 2021 ಹಾಗೂ 2023ನೇ ಸಾಲಿನಲ್ಲಿ ಜೊಕೊವಿಚ್ ಚಾಂಪಿಯನ್ ಆಗಿದ್ದರು.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲೂ ಜೊಕೊವಿಚ್ 99 ಗೆಲುವುಗಳನ್ನು ಹೊಂದಿದ್ದಾರೆ. ಇನ್ನು ವಿಂಬಲ್ಡನ್‌ನಲ್ಲಿ 97 ಹಾಗೂ ಅಮೆರಿಕನ್ ಓಪನ್‌ನಲ್ಲಿ 90 ಗೆಲುವುಗಳನ್ನು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.