ADVERTISEMENT

ಫ್ರೆಂಚ್‌ ಓಪನ್‌: ಆಟಗಾರ್ತಿಗೆ ಕೋವಿಡ್‌–19

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 11:49 IST
Last Updated 22 ಸೆಪ್ಟೆಂಬರ್ 2020, 11:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಅರ್ಹತಾ ಟೂರ್ನಿಯಲ್ಲಿ ಆಡಲಿದ್ದ ಆಟಗಾರ್ತಿ ಒಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ. ಇದರಿಂದ ಅವರನ್ನು ಟೂರ್ನಿಯಿಂದ ಕೈಬಿಡಲಾಗಿದೆ.

ಸೋಂಕಿತ ಆಟಗಾರ್ತಿಯ ಹೆಸರನ್ನು ಫ್ರೆಂಚ್‌ ಟೆನಿಸ್‌ ಫೆಡರೇಷನ್‌ (ಎಫ್‌ಎಫ್‌ಟಿ) ಬಹಿರಂಗಪಡಿಸಿಲ್ಲ. ಆದರೆ ಆ ಆಟಗಾರ್ತಿಗೆ ಏಳು ದಿನಗಳ ಕ್ವಾರಂಟೈನ್ ವಾಸಕ್ಕೆ ಸೂಚಿಸಲಾಗಿದೆ. ಮಂಗಳವಾರ ಅರ್ಹತಾ ಸುತ್ತಿನಲ್ಲಿಅವರು ಕಣಕ್ಕಿಳಿಯಬೇಕಿತ್ತು.

ಇಬ್ಬರು ಆಟಗಾರರು ಹಾಗೂ ಒಬ್ಬ ತರಬೇತುದಾರನಿಗೆ ಕೋವಿಡ್‌ ಇರುವುದುಸೋಮವಾರ ದೃಢಪಟ್ಟಿತ್ತು.

ADVERTISEMENT

ಫ್ರೆಂಚ್‌ ಓಪನ್‌ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳು ಭಾನುವಾರ ಆರಂಭವಾಗಲಿವೆ. 15 ದಿನಗಳ ಕಾಲ ಟೂರ್ನಿ ನಡೆಯಲಿದೆ. ಸಾಮಾನ್ಯವಾಗಿ ಪ್ರತಿವರ್ಷ ಮೇನಲ್ಲಿ ಟೂರ್ನಿ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಾಣುವಿನ ಹಾವಳಿಯ ಕಾರಣ ಮುಂದೂಡಲಾಗಿತ್ತು.

ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕ ಓಪನ್‌ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ 5,000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.