ADVERTISEMENT

ಟೆನಿಸ್‌ ಟೂರ್ನಿ: ಧನುಷ್‌, ಅನನಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 19:42 IST
Last Updated 27 ಫೆಬ್ರುವರಿ 2026, 19:42 IST
<div class="paragraphs"><p>ಪ್ರಶಸ್ತಿಯೊಂದಿಗೆ ಎಸ್‌.ಎಂ. ಧನುಷ್‌ ಹಾಗೂ ಅನನಿ ಗೋಪಿರೆಡ್ಡಿ</p></div>

ಪ್ರಶಸ್ತಿಯೊಂದಿಗೆ ಎಸ್‌.ಎಂ. ಧನುಷ್‌ ಹಾಗೂ ಅನನಿ ಗೋಪಿರೆಡ್ಡಿ

   

ಬೆಂಗಳೂರು: ಕರ್ನಾಟಕದ ಎಸ್‌.ಎಂ. ಧನುಷ್‌ ಹಾಗೂ ಅನನಿ ಗೋಪಿರೆಡ್ಡಿ ಅವರು ಶುಕ್ರವಾರ ಮುಕ್ತಾಯಗೊಂಡ ಎಐಟಿಎ 14 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಕಣದಲ್ಲಿ ನಡೆದ ಫೈನಲ್‌ನಲ್ಲಿ ಧನುಷ್‌ 6–1, 6–2ರಿಂದ ನೇರ ಸೆಟ್‌ಗಳಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಸಂವೃತ್‌ ಅವರನ್ನು ಮಣಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅನನಿ 6–3, 3–6, 6–3ರಿಂದ ನಿಶ್ಕಾ ಮಲ್ಲಿಕ್‌ ವಿರುದ್ಧ ಗೆಲುವು ಸಾಧಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.