ADVERTISEMENT

‘ಲಕ್ಕಿ ಲೂಸರ್‌’ಗೆ ಮಣಿದ ನೊವಾಕ್ ಜೊಕೊವಿಚ್‌

ಪಿಟಿಐ
Published 12 ಮಾರ್ಚ್ 2024, 23:30 IST
Last Updated 12 ಮಾರ್ಚ್ 2024, 23:30 IST
<div class="paragraphs"><p>ನೊವಾಕ್ ಜೊಕೊವಿಚ್‌</p></div>

ನೊವಾಕ್ ಜೊಕೊವಿಚ್‌

   

ಇಂಡಿಯನ್ ವೆಲ್ಸ್‌ (ಅಮೆರಿಕ),: ಅರ್ಹತಾ ಸುತ್ತಿನ ‘ಲಕ್ಕಿ ಲೂಸರ್‌’ ಆಗಿ ಪ್ರಧಾನ ಟೂರ್ನಿಗೆ ಅವಕಾಶ ಪಡೆದ ಲೂಕಾ ನಾರ್ಡಿ, ಸೋಮವಾರ ತಮ್ಮ ವೃತ್ತಿಜೀವನದ ಅಲ್ಪಾವಧಿಯಲ್ಲೇ ಅತಿ ದೊಡ್ಡ ಗೆಲುವನ್ನು ಸಂಪಾದಿಸಿದರು. 20 ವರ್ಷದ ಇಟಲಿಯ ಈ ಆಟಗಾರ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಟೂರ್ನಿಯ ಸಿಂಗಲ್ಸ್‌ ಮೂರನೇ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನೊವಾಕ್ ಜೊಕೊವಿಚ್‌ ಅವರನ್ನು  6–4, 3–6, 6–3 ರಿಂದ ಸೋಲಿಸಿದರು.

ವಿಶ್ವದ 123ನೇ ಕ್ರಮಾಂಕದ ಆಟಗಾರನಾದ ನಾರ್ಡಿ, ಮಾಸ್ಟರ್ಸ್‌ ಟೂರ್ನಿಯಲ್ಲಿ ಸರ್ಬಿಯಾ ದೈತ್ಯ ಆಟಗಾರನ 11 ಪಂದ್ಯಗಳ ಗೆಲುವಿನ ಸರಪಳಿಯನ್ನೂ ತುಂಡರಿಸಿದರು. ನಾರ್ಡಿ ಅವರಿಗೆ ಬಾಲ್ಯದಿಂದ ಜೋಕೊ ಆದರ್ಶಪ್ರಾಯ ಆಟಗಾರ. ಅವರ ಮನೆಯ ಬೆಡ್‌ ಮೇಲೆ ಜೊಕೊ  ಪೋಸ್ಟರ್‌ ಇದೆ.

ADVERTISEMENT

‘ಈ ರಾತ್ರಿಗೆ ಮುನ್ನ ನಾನು ಯಾರಿಗೂ ಗೊತ್ತಿರಲಿಲ್ಲ. ಜನರು ಈ ಪಂದ್ಯ ಆಸ್ವಾದಿಸಿದ್ದಾರೆ ಎಂಬ ವಿಶ್ವಾಸವಿದೆ. ಎಂದು ನಾರ್ಡಿ ಹೇಳಿದರು.

ಗೆಲುವು ಹೇಗೆ ಸಾಧಿಸಿದ್ದೀರಿ ಎಂಬ ಪ್ರಶ್ನೆಗೆ ‘ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಇದೊಂದು ಪವಾಡ. ಅಗ್ರ ನೂರು ಆಟಗಾರರ ಪಟ್ಟಿಯಿಂದ ಹೊರಗಿರುವವನು ನಾನು. ಈಗ ಜೊಕೊವಿಚ್ ಅವರನ್ನು ಸೋಲಿಸಿದ್ದೇನೆ. ಕ್ರೇಝಿ....’ ಎಂದರು.

‘ನನ್ನ ಪಾಲಿಗೆ ಇದು ಒಳ್ಳೆಯ ದಿನವಾಗಿರಲಿಲ್ಲ’ ಎಂದು ಹಲವು ಗ್ರ್ಯಾಂಡ್‌ಸ್ಲಾಮ್‌ ಗೆದ್ದಿರುವ ಜೊಕೊ ಪ್ರತಿಕ್ರಿಯಿಸಿದರು.

ನಾರ್ಡಿ ಈ ಟೂರ್ನಿಯ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್‌ ಗೊಫಿನ ಅವರಿಗೆ ಸೋತಿದ್ದರು. ಆದರೆ ಪ್ರಧಾನ ಸುತ್ತಿನಲ್ಲಿ ಆಟಗಾರನೊಬ್ಬ ಹಿಂದೆಸರಿದ ಕಾರಣ ಅವರಿಗೆ ಅವಕಾಶ ದಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.