ADVERTISEMENT

ಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿ: ಫೈನಲ್‌ಗೆ ಒಸಾಕ

ಏಜೆನ್ಸೀಸ್
Published 21 ಸೆಪ್ಟೆಂಬರ್ 2019, 19:43 IST
Last Updated 21 ಸೆಪ್ಟೆಂಬರ್ 2019, 19:43 IST
ಚೆಂಡು ಹಿಂದಿರುಗಿಸುತ್ತಿರುವ ನವೊಮಿ ಒಸಾಕ–ಎಎಫ್‌ಪಿ ಚಿತ್ರ
ಚೆಂಡು ಹಿಂದಿರುಗಿಸುತ್ತಿರುವ ನವೊಮಿ ಒಸಾಕ–ಎಎಫ್‌ಪಿ ಚಿತ್ರ   

ಟೋಕಿಯೊ: ಉತ್ತಮ ಆಟದ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ನವೊಮಿ ಒಸಾಕ, ಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ತಲುಪಿದ್ದಾರೆ. ಅವರು ಶನಿವಾರ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಎಲಿಸ್‌ ಮೆರ್ಟೆನ್ಸ್ ಅವರನ್ನು 6–4, 6–1ರಿಂದ ಸೋಲಿಸಿದರು.

ಜಪಾನ್‌ ಆಟಗಾರ್ತಿ ಒಸಾಕ, ಆಸ್ಟ್ರೇಲಿಯ ಓಪನ್‌ ನಂತರ ಮೊದಲ ಬಾರಿ ಟೂರ್ನಿಯೊಂದರ ಪ್ರಶಸ್ತಿ ಸುತ್ತು ತಲುಪಿದರು. ಫೈನಲ್‌ ಪಂದ್ಯದಲ್ಲಿ ಅವರಿಗೆ ರಷ್ಯಾದ ಅನಸ್ತಾಸಿಯಾ ಪಾಲ್ವಿಚೆಂಕೊವಾ ಸವಾಲು ಎದುರಾಗಿದೆ. ಇನ್ನೊಂದೆಡೆ ಅನಸ್ತಾಸಿಯಾ ಅವರು ಜರ್ಮನಿಯ ಅಂಜೆಲಿಕ್‌ ಕೆರ್ಬರ್‌ ಅವರನ್ನು 6–3, 6–3ರಿಂದ ಸೋಲಿಸಿ ಅಂತಿಮ ಸುತ್ತಿಗೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT