ADVERTISEMENT

T20 ವಿಶ್ವಕಪ್: ವಿಂಡೀಸ್ ವಿರುದ್ಧ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 9:27 IST
Last Updated 26 ಫೆಬ್ರುವರಿ 2026, 9:27 IST
<div class="paragraphs"><p>&nbsp; ಹೋಪ್‌, ಮರ್ಕರಂ</p></div>

  ಹೋಪ್‌, ಮರ್ಕರಂ

   

ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದಲ್ಲಿ ಅಜೇಯವಾಗಿರುವ ಈ ಎರಡು ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಸ್ಥಾನಕ್ಕಾಗಿ ಹಣಾಹಣಿ ನಡೆಸುತ್ತಿವೆ.

ADVERTISEMENT

ಬೀಸಾಟವಾಡುವ ವೆಸ್ಟ್‌ ಇಂಡೀಸ್ ತಂಡದ ಸಾಮರ್ಥ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದಿಂದ ಸತ್ವಪರೀಕ್ಷೆ ಎದುರಾಗಿದ್ದು ವೆಸ್ಟ್‌ ಇಂಡೀಸ್ ಬ್ಯಾಟಿಂಗ್‌ ಮಾಡುತ್ತಿದೆ.

ಫೇವರೀಟ್‌ ತಂಡವಾಗಿರುವ ಭಾರತ ವಿರುದ್ಧ ಇದೇ ಕ್ರೀಡಾಂಗಣದಲ್ಲಿ 76 ರನ್‌ಗಳ ಅಧಿಕಾರಯುತ ಗೆಲುವು ದಾಖಲಿಸಿರುವ ಏಡನ್ ಮರ್ಕರಂ ಪಡೆ ಈ ಪಂದ್ಯವನ್ನು ಆಡುತ್ತಿದೆ. ವೆಸ್ಟ್‌ ಇಂಡೀಸ್ ತಂಡ, ಮುಂಬೈನಲ್ಲಿ ನಡೆದ ಸೂಪರ್ ಎಂಟರ ಇನ್ನೊಂದು ಪಂದ್ಯದಲ್ಲಿ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿ ಜಿಂಬಾಬ್ವೆ ವಿರುದ್ಧ 107 ರನ್‌ಗಳ ದೊಡ್ಡ ಗೆಲುವು ಸಾಧಿಸಿದೆ.

ಭಾರತದ ಮೇಲೂ ಪರಿಣಾಮ: ವೆಸ್ಟ್ ಇಂಡೀಸ್ ಈ ಪಂದ್ಯ ಗೆದ್ದರೆ ಭಾರತಕ್ಕೆ ಅದು ತಲೆನೋವು ತರಲಿದೆ. ಮಾತ್ರವಲ್ಲ, ವೆಸ್ಟ್‌ ಇಂಡೀಸ್ ತಂಡದ ಸೆಮಿಫೈನಲ್ ಹಾದಿ ತೆರೆಯಲಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ಪಂದ್ಯದವರೆಗೆ ಕಾಯಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತ ನಾಲ್ಕರ ಘಟ್ಟ ತಲುಪಬೇಕಾದರೆ, ವೆಸ್ಟ್‌ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳನ್ನು ದೊಡ್ಡ ಅಂತರದಲ್ಲಿ ಸೋಲಿಸಲೇಬೇಕಾಗುತ್ತದೆ. ಒಟ್ಟಾರೆ ಲೆಕ್ಕಾಚಾರ ಗುರುವಾರದ ಪಂದ್ಯಗಳ ಬಳಿಕ ನಿರ್ಣಾಯಕ ಸ್ವರೂಪ ಪಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.