ADVERTISEMENT

ಜಪಾನ್‌ನಲ್ಲಿ ಮಡಚುವ ಕಾರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಜಪಾನ್‌ ರಸ್ತೆಯಲ್ಲಿ ಮಡಚುವ ಕಾರು
ಜಪಾನ್‌ ರಸ್ತೆಯಲ್ಲಿ ಮಡಚುವ ಕಾರು   

‘ಆ ಜಾಗಕ್ಕೇನೋ ಕಾರಿನಲ್ಲಿ ಹೋಗಬಹುದು. ಆದರೆ, ಕಾರನ್ನು ಎಲ್ಲಿ ಪಾರ್ಕಿಂಗ್ ಮಾಡುವುದು’ ಇದು ಮಹಾನಗರಗಳಲ್ಲಿನ ಕಾರು ಮಾಲೀಕರ ದಿನ ನಿತ್ಯದ ಗೋಳು. ಕಾರಿಗೊಂದು ಸರಿಯಾದ ಜಾಗ ಪತ್ತೆಹಚ್ಚುವುದೇ ಹರಸಾಹಸದ ಕೆಲಸ. ಕಾರು ನಿಲ್ಲಿಸಲು ಜಾಗ ಸಿಕ್ಕರೂ ಅದರ ಭದ್ರತೆ ಕುರಿತು ಆತಂಕವಿರುತ್ತದೆ.

ಈ ಎಲ್ಲ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಜಪಾನ್‌ನ ಆಟೊಮೊಬೈಲ್‌ ಕಂಪನಿಯೊಂದು ಕಂಡು ಹಿಡಿದಿದೆ. ಅದೇ ಮಡಚುವ ಕಾರು. ಹೌದು ಕಾರು ದೊಡ್ಡದಿದ್ದರೆ ಅದನ್ನು ನಿಲ್ಲಿಸಲು ಹೆಚ್ಚಿನ ಜಾಗಬೇಕು. ಆದರೆ ಅದೇ ಕಾರನ್ನು ಮಡಚಿದರೆ ಕಡಿಮೆ ಸ್ಥಳದಲ್ಲೂ ಪಾರ್ಕಿಂಗ್ ಮಾಡಬಹುದು.

‘ಅರ್ಥ್‌ 1’ ಹೆಸರಿನ ಈ ವಾಹನ ಇತ್ತೀಚೆಗೆ ಟೋಕಿಯೊದಲ್ಲಿ ಸಂಚರಿಸಿವಾಹನ ಪ್ರಿಯರಲ್ಲಿ ಅಚ್ಚರಿ ಮೂಡಿಸಿತು. ಟ್ರಾನ್ಸ್‌ಫಾರ್ಮರ್‌ ಹೆಸರಿನ ಮಕ್ಕಳ ಆಟಿಕೆಯಿಂದ ಪ್ರೇರಣೆ ಪಡೆದಿರುವ ಈ ವಾಹನವನ್ನು ಜಪಾನ್‌ನ ಖ್ಯಾತ ಕಲಾವಿದ ಕುನಿಯೊ ಒಕವಾರ ಅವರು ವಿನ್ಯಾಸ ಮಾಡಿದ್ದಾರೆ.

ADVERTISEMENT

ಜಪಾನ್‌ನ ಅನಿಮೇಷನ್ ಉದ್ಯಮದಲ್ಲಿ ಕುನಿಯೊ ಅವರದು ಪ್ರಸಿದ್ಧ ಹೆಸರು. ಮೆಕ್ಯಾನಿಕಲ್ ಡಿಸೈನರ್‌ ಆಗಿರುವಇವರು ರೋಬೊಟ್‌, ಹಡಗು ಮತ್ತುಇತರ ಮೆಕ್ಯಾನಿಕಲ್‌ ವಸ್ತುಗಳನ್ನು ವಿನ್ಯಾಸ ಮಾಡಿದ್ದಾರೆ.

ಎರಡು ಆಸನಗಳ ಈ ಮಡಚುವ ಕಾರನ್ನು ರೋಬೊಟ್‌ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಟೋಕಿಯೊದಲ್ಲಿ ಮುಂದಿನ ತಲೆಮಾರಿಗೆ ಕಾರು ವಿನ್ಯಾಸ ಮತ್ತು ತಯಾರಕ ಕಂಪನಿ ಎಂದೇ ಹೆಸರು ಪಡೆದಿರುವ ‘ಫೋರ್‌ ಲಿಂಕ್‌ ಸಿಸ್ಟಂ’ ಈ ಮಡಚುವ ಕಾರನ್ನು ತಯಾರಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ವಾಣಿಜ್ಯ ಉದ್ದೇಶಕ್ಕೆ ರಸ್ತೆಯಲ್ಲಿ ಸಂಚಾರ ಆರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

**

ಸಾಂಪ್ರದಾಯಿಕ ಕಾರುಗಳಿಗಿಂತ ಯುವಜನರು ಈ ರೀತಿಯ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಇದು ಕಾರೇ ಆಗಿದ್ದರೂ ಚಾಲಕರಿಗೆ ಇದು ಕಾರು ಎಂದೇ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಇದರ ವಿನ್ಯಾಸ ವಿಶಿಷ್ಟವಾಗಿದೆ.

–ಹಿರೋಮಿ ಕಿನೊಶಿತ, ಅಧ್ಯಕ್ಷ , ಪೋರ್ ಲಿಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.