ADVERTISEMENT

ಕೋವಿಡ್ | ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ; ಅಪಾಯದ ಮಾಹಿತಿ ನೀಡಲಿದೆ ‘ಆರೋಗ್ಯ ಸೇತು’

ಏಜೆನ್ಸೀಸ್
Published 6 ಜುಲೈ 2020, 4:33 IST
Last Updated 6 ಜುಲೈ 2020, 4:33 IST
   

ಮೊಬೈಲ್‌ಗಳಲ್ಲಿರುವ ಬ್ಲೂಟೂಥ್‌ ಸಂಪರ್ಕಗಳ ಆಧಾರದ ಮೇಲೆ ಕೋವಿಡ್‌–19 ಅಪಾಯದ ಮಟ್ಟವನ್ನು ನಿರ್ಧರಿಸಿಕೊಳ್ಳಲು ಅನುಕೂಲವಾಗುವಂತಹ ಹೊಸ ವೈಶಿಷ್ಟ್ಯವನ್ನು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಅಳವಡಿಸಲಾಗಿದೆ.

ಈ ಸಂಬಂಧ ಸರ್ಕಾರದ ಆರೋಗ್ಯ ಸೇತು ಟ್ವಿಟರ್‌ ಹ್ಯಾಂಡಲ್‌ನಲ್ಲಿಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ. ಮೊದಲು ಆ್ಯಪ್‌ಅನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಹೊರಗೆ ಸಂಚರಿಸುವಾಗ ಬ್ಲೂಟೂಥ್‌ ಆನ್‌ ಮಾಡಿಟ್ಟುಕೊಂಡಿದ್ದರೆ, ನಮಗೆ ಹತ್ತಿರದಲ್ಲಿರುವ ಹಾಗೂ ನಾವು ಇರುವಲ್ಲಿ ಸಂಪರ್ಕಿತರ ಮಾಹಿತಿ ಸಿಗುತ್ತದೆ. ಒಂದು ವೇಳೆ ಆ ಪಟ್ಟಿಯಲ್ಲಿ ಸೋಂಕಿತರು ಅಥವಾ ಸೋಂಕಿನ ಲಕ್ಷಣಗಳು ಇರುವವರು ಇದ್ದರೆ ತಿಳಿಯುತ್ತದೆಎಂದು ಮಾಹಿತಿ ನೀಡಲಾಗಿದ್ದು,ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಸೂಚಿಸಿದೆ.

‘ಆರೋಗ್ಯ ಸೇತು ಹೊಸ ವೈಶಿಷ್ಟ್ಯ ಪಡೆದುಕೊಂಡಿದೆ. ನಿಮ್ಮ ಬ್ಲೂಟೂಥ್‌ ಸಂಪರ್ಕಗಳ ಬಗ್ಗೆ ತಿಳಿಯಲು ಮತ್ತು ಅಪಾಯದ ಮಟ್ಟವನ್ನು ನಿರ್ಣಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಆ್ಯಪ್‌ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ.ಮಾಹಿತಿ ಪಡೆಯಲು ಇತ್ತೀಚಿನ ಸಂಪರ್ಕಗಳ ಮೇಲೆ ಕ್ಲಿಕ್‌ ಮಾಡಿರಿ’ ಎಂದು ಟ್ವೀಟ್‌ ಮಾಡಲಾಗಿದೆ.

ADVERTISEMENT

‘ಆರೋಗ್ಯ ಸೇತು ಆ್ಯಪ್‌ ಮೇಲೆ ಕ್ಲಿಕ್ ಮಾಡುವುದರಿಂದ ಬ್ಲೂಟೂಥ್‌ ವ್ಯಾಪ್ತಿಯಲ್ಲಿರುವ ಸಂಪರ್ಕಿತರ ಮಾಹಿತಿ ದೊರೆಯುತ್ತದೆ. ಅವರ ಸ್ಥಿತಿಯನ್ನು ತಿಳಿದುಕೊಳ್ಳಬೇಕಾದರೆ, ಮೊದಲು ನೀವೂ ನಿಮ್ಮ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ನಂತರ ನಿಮಗೆ ಮಾಹಿತಿ ಲಭ್ಯವಾಗುತ್ತದೆ’ ಎಂದು ತಿಳಿಸಿದೆ.

ಅತ್ಯಂತ ಜನಪ್ರಿಯ ಆ್ಯಪ್‌ಗಳಲ್ಲೊಂದಾದ ಇದನ್ನು ಬಿಡುಗಡೆಯಾದಾಗಿನಿಂದ (ಏಪ್ರಿಲ್‌ನಿಂದ) ಇಲ್ಲಿಯವರೆಗೆ ಸುಮಾರು 12 ಕೋಟಿಗೂ ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.ಸದ್ಯ ಈ ಅಪ್‌ಡೇಟ್‌ ಆ್ಯಂಡ್ರಾಯ್ಡ್‌ ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಮಾತ್ರವೇ ಲಭ್ಯವಿದೆ. ಉಳಿದ ಐಒಎಸ್‌ಗಳಿಗೆ ಶೀಘ್ರವೇ ಅಳವಡಿಸಲಾಗುತ್ತದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.