ADVERTISEMENT

ಎ.ಐ ಶೃಂಗಕ್ಕೆ ವ್ಯಾಪಕ ಬೆಂಬಲ; ಫೆ.21ರವರೆಗೆ ವಿಸ್ತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 8:25 IST
Last Updated 18 ಫೆಬ್ರುವರಿ 2026, 8:25 IST
<div class="paragraphs"><p>ಭಾರತ ಮಂಟಪ ಎ.ಐ ಇಂಪ್ಯಾಕ್ಟ್‌ ಶೃಂಗ</p></div>

ಭಾರತ ಮಂಟಪ ಎ.ಐ ಇಂಪ್ಯಾಕ್ಟ್‌ ಶೃಂಗ

   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 'ಕೃತಕ ಬುದ್ಧಿಮತ್ತೆ (ಎ.ಐ) ಇಂಪ್ಯಾಕ್ಟ್‌ ಶೃಂಗ'ಕ್ಕೆ ವ್ಯಾಪಕ ಬೆಂಬಲ ದೊರೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಎ.ಐ. ಶೃಂಗವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ADVERTISEMENT

ಈ ಕುರಿತು ಮಾಹಿತಿ ಕೇಂದ್ರದ ತಂತ್ರಜ್ಞಾನ (ಐ.ಟಿ) ಕಾರ್ಯದರ್ಶಿ ಎಸ್. ಕೃಷ್ಣನ್ ಮಾಹಿತಿ ನೀಡಿದ್ದು, 'ಎ.ಐ ಶೃಂಗ 2026ಕ್ಕೆ ಅಗಾಧ ಪ್ರತಿಕ್ರಿಯೆ ದೊರಕಿರುವ ಹಿನ್ನೆಲೆಯಲ್ಲಿ ಫೆಬ್ರುವರಿ 21ರವರೆಗೆ ವಿಸ್ತರಿಸಲಾಗಿದೆ' ಎಂದು ತಿಳಿಸಿದ್ದಾರೆ.

ಭಾರತದ ಪಾಲಿಗೆ ಈ ಶೃಂಗವು ಮಹತ್ವದ್ದಾಗಲಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಕಂಪನಿಗಳು, ಜಾಗತಿಕ ನಾಯಕರನ್ನು ಒಂದೆಡೆ ಕರೆತರಲಿರುವ 'ಎ.ಐ. ಇಂಪ್ಯಾಕ್ಟ್‌ ಶೃಂಗ'ಕ್ಕೆ ಭಾರತವು ಆತಿಥ್ಯ ವಹಿಸುತ್ತಿದೆ.

45ಕ್ಕೂ ಹೆಚ್ಚು ದೇಶಗಳ ಸಚಿವರ ನಿಯೋಗಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.