ADVERTISEMENT

ಎ.ಐ ಲಭ್ಯತೆ ಹೆಚ್ಚಿಸಲು ಅಮೆಜಾನ್ ಹೆಜ್ಜೆ

ಪಿಟಿಐ
Published 4 ಡಿಸೆಂಬರ್ 2025, 19:39 IST
Last Updated 4 ಡಿಸೆಂಬರ್ 2025, 19:39 IST
ಅಮೆಜಾನ್
ಅಮೆಜಾನ್   

ಬೆಂಗಳೂರು: 2030ರ ವೇಳೆಗೆ ದೇಶದ ಕೋಟ್ಯಂತರ ಜನರ ಬಳಕೆಗೆ ಎ.ಐ ಪರಿಕರಗಳು ಲಭ್ಯವಾಗುವಂತೆ ಮಾಡುವ ಯೋಜನೆ ಹೊಂದಿರುವುದಾಗಿ ಅಮೆಜಾನ್ ಹೇಳಿದೆ.

ಡಿಜಿಟಲ್ ಒಳಗೊಳ್ಳುವಿಕೆಗೆ ನೆರವಾಗಲು ಕೇಂದ್ರ ಸರ್ಕಾರದ ಎ.ಐ. ಮಿಷನ್‌ಗೆ ಬೆಂಬಲವಾಗಿ ನಿಲ್ಲುವುದಾಗಿ ಅದು ತಿಳಿಸಿದೆ.

2030ರ ವೇಳೆಗೆ ಸರ್ಕಾರಿ ಶಾಲೆಗಳ ಒಟ್ಟು 40 ಲಕ್ಷ ವಿದ್ಯಾರ್ಥಿಗಳಿಗೆ ಎ.ಐ ಸಾಕ್ಷರತೆ ನೀಡಲು, ಅವರಲ್ಲಿ ವೃತ್ತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಯತ್ನಿಸುವುದಾಗಿ ಕಂಪನಿಯ ಪ್ರಕಟಣೆ ಹೇಳಿದೆ.

ADVERTISEMENT

ಒಟ್ಟು 1.5 ಕೋಟಿಗೂ ಹೆಚ್ಚಿನ ಸಂಖ್ಯೆಯ ಸಣ್ಣ ಉದ್ದಿಮೆಗಳಿಗೆ ಎ.ಐ ಪ್ರಯೋಜನಗಳನ್ನು ದೊರಕಿಸಿ
ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.