ನವದೆಹಲಿ: ಈಚೆಗೆ ಬಿಡುಗಡೆ ಮಾಡಿರುವ ‘ಐಫೋನ್ 14’ ಭಾರತದಲ್ಲಿ ತಯಾರಾಗಲಿದೆ ಎಂದು ಆ್ಯಪಲ್ ಕಂಪನಿಯು ಸೋಮವಾರ ತಿಳಿಸಿದೆ. ಕಂಪನಿಯು ತನ್ನ ಕೆಲವು ಉತ್ಪನ್ನಗಳ ತಯಾರಿಕೆಯನ್ನು ಚೀನಾದಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದೆ.
ಐಫೋನ್ 14 ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದೆ. ಈ ವರ್ಷದ ಕೊನೆಯ ವೇಳೆಗೆ ಆ್ಯಪಲ್ ಕಂಪನಿಯು ಐಫೋನ್ 14 ಉತ್ಪಾದನೆಯ ಶೇಕಡ 5ರಷ್ಟನ್ನು ಭಾರತಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಜೆ.ಪಿ. ಮಾರ್ಗನ್ ಅಂದಾಜಿಸಿದೆ.
2025ರ ಸುಮಾರಿಗೆ ಆ್ಯಪಲ್ ಕಂಪನಿಯು ಪ್ರತಿ ನಾಲ್ಕು ಐಫೋನ್‌ಗಳಲ್ಲಿ ಒಂದನ್ನು ಭಾರತದಲ್ಲಿಯೇ ತಯಾರಿಸಬಹುದು ಎಂದು ಜೆ.ಪಿ. ಮಾರ್ಗನ್ ಅಂದಾಜು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.