ADVERTISEMENT

ಪ್ರವಾಸಿ ತಾಣಗಳ ಮಾಹಿತಿಗೆ ‘ಹೈವೆ ಡಿಲೈಟ್’

ಆ್ಯಪ್‌ ಲೋಕ

​ಪ್ರಜಾವಾಣಿ ವಾರ್ತೆ
Published 1 ಮೇ 2020, 19:30 IST
Last Updated 1 ಮೇ 2020, 19:30 IST
highway
highway   

ಭಾರತದ 60 ಸಾವಿರಕ್ಕೂ ಅಧಿಕ ಕಿಲೋ ಮೀಟರ್ ದೂರದ ಹೆದ್ದಾರಿ, ತಂಗುದಾಣ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಆಡಿಯೊ ಮಾಹಿತಿ ಇರುವ ‘ಹೈವೆ ಡಿಲೈಟ್’ ಎಂಬ ಮೊಬೈಲ್‌ ಆ್ಯಪ್ ಆರಂಭವಾಗಿದೆ. ಇದರಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ 35ಕ್ಕೂ ಹೆಚ್ಚು ದೇವಾಲಯಗಳು ಹಾಗೂ ಐತಿಹಾಸಿಕ ಸ್ಥಳಗಳ ಬಗ್ಗೆ ಧ್ವನಿ ಮುದ್ರಿತ ಮಾರ್ಗದರ್ಶನವಿದೆ.

ಇದು ಹೆದ್ದಾರಿ ಮಾಹಿತಿ ಹಾಗೂ ಧ್ವನಿ ರೂಪದ ವಿಷಯ ಸೂಚಿ ಆಧರಿತ ಅಪ್ಲಿಕೇಷನ್‌. ಪಿನಾಕಿನ್ ಹಾಗೂರಾಜ್ಯ ಪ್ರವಾಸೋದ್ಯಮ ಇಲಾಖೆಯ ಚಾಲೆಂಜ್ ಫಂಡೆಡ್ ಸ್ಟಾರ್ಟ್‌ಅಪ್‌‌‌ ಪ್ರೋಗ್ರಾಂನ ಭಾಗವಾಗಿ ‘ಹೈವೆ ಡಿಲೈಟ್’ ಆರಂಭಗೊಂಡಿದೆ.

ಲಾಕ್‍ಡೌನ್‌ ಅವಧಿಯಲ್ಲಿ ಮನೆಯಲ್ಲೇ ಕುಳಿತಿರುವವರು, ಇತಿಹಾಸದ ಬಗ್ಗೆ ಒಲವು ಹೊಂದಿರುವವರು ಈ ಅಪ್ಲಿಕೇಷನ್‌ ಮೂಲಕ ಪುರಾಣ ಪ್ರಸಿದ್ಧ ಸ್ಥಳಗಳ ಬಗೆಗಿನ ವಿಚಾರಗಳನ್ನು ತಿಳಿದುಕೊಳ್ಳಬಹುದು. ಪ್ರತಿ ಸ್ಥಳದ ಪ್ರಾಥಮಿಕ ಮಾಹಿತಿ ಇದರಲ್ಲಿ ಲಭ್ಯವಿದೆ. ಆದರೆ, ತುಂಬಾ ಆಳವಾದ ಮಾಹಿತಿ ಬೇಕೆಂದರೆ ವಾರ್ಷಿಕ ₹49 ಶುಲ್ಕ ಪಾವತಿಸಬೇಕು. ಈ ಶುಲ್ಕದಲ್ಲಿ 35ಕ್ಕೂ ಹೆಚ್ಚು ಸ್ಥಳಗಳ ಬಗೆಗಿನ ಧ್ವನಿ ಮುದ್ರಿತ ಮಾಹಿತಿ ಕೇಳಬಹುದು. ಲಾಕ್‍ಡೌನ್ ಮುಗಿದ ನಂತರ ಆ ಸ್ಥಳಗಳಿಗೆ ಭೇಟಿ ನೀಡಿ, ತಾವು ಕೇಳಿದ ವಿಚಾರಗಳನ್ನು ನೋಡಬಹುದು. ಈ ಉದ್ದೇಶದ ಹಿನ್ನೆಲೆಯಲ್ಲೇ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಮೈಸೂರು ಅರಮನೆ, ಹಂಪಿ, ಐಹೊಳೆ, ಬಾದಾಮಿ, ಗೋಳಗುಮ್ಮಟ ಸೇರಿ ಕರ್ನಾಟಕದ 17ಕ್ಕೂ ಅಧಿಕ ಸ್ಥಳಗಳ ಮಾಹಿತಿ ಈ ಧ್ವನಿ ಮುದ್ರಣದಲ್ಲಿದೆ. ಮದುರೈ ಮೀನಾಕ್ಷಿ ದೇವಾಲಯ, ಮಹಾಬಲಿಪುರ ಹಾಗೂ ಕಾಂಚಿಪುರ ದೇವಾಲಯ ಸೇರಿದಂತೆ ತಮಿಳುನಾಡಿನ 15ಕ್ಕೂ ಹೆಚ್ಚು ಸ್ಥಳಗಳ ಮಾಹಿತಿ ಇದರಲ್ಲಿದೆ.

ಇಂಗ್ಲಿಷ್, ಹಿಂದಿ, ಕನ್ನಡ ಹಾಗೂ ತಮಿಳು ಈ ನಾಲ್ಕೂ ಭಾಷೆಗಳಲ್ಲಿ ಈ ಧ್ವನಿ ಮುದ್ರಣ ಲಭ್ಯವಿದೆ. ಈ ಧ್ವನಿ ಮುದ್ರಣ ವ್ಯವಸ್ಥೆ, ಇತಿಹಾಸ, ಪುರಾಣ, ವಿಜ್ಞಾನ ಹಾಗೂ ವಾಸ್ತುಶಿಲ್ಪಗಳನ್ನು ಒಟ್ಟುಗೂಡಿಸಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಅರ್ಥವಾಗುವಂತಹ ಸುಲಭ ಭಾಷೆಯಲ್ಲಿ ಇದೆ.

ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಕಾರ್ಯಾಚರಣೆ ವ್ಯವಸ್ಥೆಗಳಿಗೆ ಹೈವೆ ಡಿಲೈಟ್ ಆ್ಯಪ್‌ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.