ನವದೆಹಲಿ: ಭಾರತದಲ್ಲಿಯೇ 16ಇ ಸರಣಿಯ ಐಫೋನ್‌ಗಳ ಜೋಡಣೆ ಕಾರ್ಯ ನಡೆಯಲಿದೆ. ದೇಶೀಯವಾಗಿ ಮಾರಾಟ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು, ವಿದೇಶಗಳಿಗೂ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಆ್ಯಪಲ್ ಕಂಪನಿ ಗುರುವಾರ ತಿಳಿಸಿದೆ
ಇದರ ಆರಂಭಿಕ ಬೆಲೆ ₹59,900 ಆಗಿದ್ದು, ಫೆಬ್ರುವರಿ 21ರಿಂದ ಮುಂಗಡ ಬುಕಿಂಗ್ ಆರಂಭವಾಗಲಿದೆ. ಫೆಬ್ರುವರಿ 28ರ ನಂತರ ಆ್ಯಪಲ್‌ನ ಮಳಿಗೆಗಳು ಮತ್ತು ಕಂಪನಿಯ ಅಧಿಕೃತ ಪಾಲುದಾರರ ಮಳಿಗೆಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ತಿಳಿಸಿದೆ.
ಈ ಹೊಸ ಮಾದರಿಯ ಐಫೋನ್ ಎ18 ಚಿಪ್ ಹೊಂದಿದೆ. ಆ್ಯಪಲ್ ಇಂಟೆಲಿಜೆನ್ಸ್, 48 ಎಂಪಿ ಫ್ಯುಷನ್ ಕ್ಯಾಮೆರಾ, 2 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿರುವ ಟೆಲಿಫೋಟೊ ಲೆನ್ಸ್ ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.