ADVERTISEMENT

ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾದ ಐಟೆಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2022, 10:25 IST
Last Updated 18 ಮಾರ್ಚ್ 2022, 10:25 IST
   

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಐಟೆಲ್, ಹೊಸ ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಕಡಿಮೆ ದರಕ್ಕೆ ಹೆಚ್ಚಿನ ಫೀಚರ್‌ಗಳನ್ನು ಒದಗಿಸುವ ಮೂಲಕ ಐಟೆಲ್, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆ ಎಂದು ಕಂಪನಿ ಹೇಳಿದೆ.

ಹೊಸ ಸ್ಮಾರ್ಟ್‌ಫೋನ್, 3GB RAM ಮತ್ತು 64 GB ಸ್ಟೋರೇಜ್ ಹೊಂದಿರುತ್ತದೆ ಎನ್ನಲಾಗಿದ್ದು, 5000mAh ಬ್ಯಾಟರಿ ಜತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಲಿದೆ ಎಂದು ಐಟೆಲ್ ತಿಳಿಸಿದೆ.

ADVERTISEMENT

ನೂತನ ಫೋನ್ ವೈಶಿಷ್ಟ್ಯಗಳ ಕುರಿತು ಐಟೆಲ್ ಸಾಮಾಜಿಕ ತಾಣಗಳಲ್ಲಿ ಟೀಸರ್ ಬಿಡುಗಡೆ ಮಾಡಿದೆ.

ಆ್ಯಂಡ್ರಾಯ್ಡ್ 11, 8MP + VGA ಹಿಂಬದಿ ಎರಡು ಕ್ಯಾಮೆರಾ ಇದರಲ್ಲಿದೆ.

ಪ್ರೀಮಿಯಂ ಫೀಚರ್‌ಗಳ ಐಟೆಲ್ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.