ನ್ಯಾಯಸೇತು
ಕ್ರಿಮಿನಲ್ ಕಾನೂನು, ಆಸ್ತಿ ವಿವಾದ ಸೇರಿ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ವಾಟ್ಸ್‌ಆ್ಯಪ್ ಆಧಾರಿತ 'ನ್ಯಾಯಸೇತು' ಚಾಟ್‌ಬಾಟ್ ಸೇವೆಯನ್ನು ಆರಂಭಿಸಿದೆ.
ನ್ಯಾಯ ಸೇತು ಡಿಜಿಟಲ್ ಕಾನೂನು ಸಹಾಯಕ ಸೇವೆಯಾಗಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಪರಿಚಯಿಸಿದ ಡಿಜಿಟಲ್ ಕಾನೂನು ನೆರವು ಸೇವೆಯಾಗಿದೆ.
ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ವಾಟ್ಸ್‌ಆ್ಯಪ್, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೂಕ್ತ ಉತ್ತರ, ಮಾರ್ಗದರ್ಶನವನ್ನು ನೀಡುತ್ತದೆ. ಸಾಮಾನ್ಯ ಪ್ರಶ್ನೆಗಳಿಗೆ ಒಂದೇ ರೀತಿಯ ಉತ್ತರ ನೀಡುವ ಮತ್ತು ಬಳಕೆಗೆ ಸುಲಭವಾದ ವೇದಿಕೆಯನ್ನು ನೀಡುವ ಮೂಲಕ ನ್ಯಾಯ ಒದಗಿಸುವುದು ಇದರ ಉದ್ದೇಶವಾಗಿದೆ.
ಇದು ನ್ಯಾಯಾಲಯ ಅಥವಾ ವಕೀಲರನ್ನು ಬದಲಾಯಿಸುವುದಿಲ್ಲ. ಪ್ರತಿಯಾಗಿ ಜನರಿಗೆ ಕಾನೂನಿನ ಕಾರ್ಯವಿಧಾನಗಳು, ಹಕ್ಕುಗಳು ಮತ್ತು ಔಪಚಾರಿಕ ಕಾನೂನು ಮಾರ್ಗಗಳನ್ನು ಸಂಪರ್ಕಿಸುವ ಮೊದಲು ಸಂಭವನೀಯ ಮುಂದಿನ ಹಂತಗಳು ಬಗ್ಗೆ ಮಾಹಿತಿ ನೀಡುತ್ತದೆ.
ಯಾವೆಲ್ಲಾ ವಿಷಯಗಳ ಬಗ್ಗೆ ಮಾಹಿತಿ ಲಭ್ಯ?
ವಿವಾದಗಳು ಮತ್ತು ನೋಟಿಸ್‌ಗಳಂತಹ ನಾಗರಿಕ ಕಾನೂನು ವಿಷಯಗಳು
ಕ್ರಿಮಿನಲ್ ಕಾನೂನಿಗೆ ಸಂಬಂಧಿತ ಮಾರ್ಗದರ್ಶನ
ಕುಟುಂಬ ಮತ್ತು ವೈವಾಹಿಕ ಸಮಸ್ಯೆಗಳು
ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿತ ಮಾಹಿತಿ
ಕಾರ್ಪೊರೇಟ್ ಮತ್ತು ವ್ಯವಹಾರಕ್ಕೆ ಸಂಬಂಧಿತ ಕಾನೂನು ಪ್ರಶ್ನೆಗಳು
ರಕ್ಷಣೆಗೆ ಸಂಬಂಧಿತ ಕಾನೂನು ವಿಷಯಗಳು
ಹೀಗೆ ಬಳಸಿ
7217711814 ಈ ನಂಬರ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ‘ಹಾಯ್ (Hi)’ ಎಂದು ಮೆಸೇಜ್ ಕಳಿಸಿದರೆ, ಏನು ಸಹಾಯ ಬೇಕು ಎಂಬ ಆಯ್ಕೆ ತೋರಿಸುತ್ತದೆ. ನಂತರ ಅಗತ್ಯವಿರುವ ಸಲಹೆಯನ್ನು ಆಯ್ಕೆ ಮಾಡಿ ಕಳಿಸಿದರೆ, ಮಾಹಿತಿ ಇರುವ ಲಿಂಕ್ ಅನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.