ADVERTISEMENT

ಭಾರತೀಯ ಮಾರುಕಟ್ಟೆಗೆ ಮೋಟೊ ಜಿ9 ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 9:41 IST
Last Updated 25 ಆಗಸ್ಟ್ 2020, 9:41 IST
ಮೋಟೊ ಜಿ9
ಮೋಟೊ ಜಿ9   

ಮೊಟೊರೋಲಾ ತನ್ನ ಜನಪ್ರಿಯ ಜಿ ಫ್ರಾಂಚೈಸಿಯಲ್ಲಿ ಇದೀಗ ‘ಮೋಟೊ ಜಿ9’ ಸ್ಮಾರ್ಟ್‌ ಮೊಬೈಲ್‌ ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮುಂದಿನ ಪೀಳಿಗೆಯ ನೆಚ್ಚಿನ ಸ್ಮಾರ್ಟ್ ಫೋನ್ ಆಗುವ ನಿರೀಕ್ಷೆ ಮೂಡಿಸಿದೆ. ಗ್ರಾಹಕರ ಅಭಿರುಚಿ ಮತ್ತು ಅವರ ಬೇಡಿಕೆಗೆ ತಕ್ಕಂತೆ ಈ ಫೋನ್ ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲೇ ತಯಾರಾಗಿರುವ ಉತ್ಪನ್ನವಾಗಿದೆ.

ಫೋನ್‌ ವೈಶಿಷ್ಟ್ಯಗಳು

*‘ಮೋಟೊ ಜಿ9’ ಸೂಪರ್ ರೆಸ್ಪಾನ್ಸಿವ್ ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 662 ಮೊಬೈಲ್ ಪ್ಲಾಟ್ ಫಾರ್ಮ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎನಿಸಿದೆ.

ADVERTISEMENT

* ಅತ್ಯದ್ಭುತವಾದ ಎ.ಐ ಕಾರ್ಯಕ್ಷಮತೆ ಮತ್ತು ಡೈನಾಮಿಕ್ ಕ್ಯಾಮೆರಾ ಸಾಮರ್ಥ್ಯ ಹೊಂದಿದೆ.

* 5000 ಎಂಎಎಚ್ ಬ್ಯಾಟರಿ ಮತ್ತು 20W ಟರ್ಬೋ ಪವರ್ ಚಾರ್ಜಿಂಗ್ ವ್ಯವಸ್ಥೆ ಇದ್ದು, ಎರಡು ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರಲಿದೆ.

* ಇದರಲ್ಲಿನ ಟ್ರಿಪಲ್ ಕ್ಯಾಮೆರಾ ಸಿಸ್ಟಂನಲ್ಲಿ 48 ಎಂಪಿ ಮೇನ್ ಸೆನ್ಸಾರ್ ಇರಲಿದೆ. ಯಾವುದೇ ಮಂದ ಬೆಳಕಿನಲ್ಲಿಯೂ ಗುಣಮಟ್ಟದ ಫೋಟೊ ಸೆರೆ ಹಿಡಿಯಬಹುದು.

* 48 ಎಂಪಿ ಮುಖ್ಯ ಕ್ಯಾಮೆರಾವು ಸಂಪೂರ್ಣ ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನ ಹೊಂದಿದೆ. ಇದರಲ್ಲಿ 4x ಲೈಟ್ ಸೆನ್ಸಿಟಿವಿಟಿ, ನೈಟ್ ವಿಶನ್ ಮೋಡ್ ಮತ್ತು ಕ್ಲಾಸ್ ಲೀಡಿಂಗ್, ಲಾರ್ಜ್ ಎಫ್/1.7 ಅಪೆರ್ಚರ್ ವೈಶಿಷ್ಟ್ಯತೆಗಳಿವೆ.

* ಅಲ್ಟ್ರಾ-ಇಮೆರ್ಸಿವ್, ಅಲ್ಟ್ರಾ-ವೈಡ್ ಡಿಸ್ ಪ್ಲೇ ಇದ್ದು, ಇದರಲ್ಲಿನ ಅಲ್ಟ್ರಾ ವೈಡ್ ಸ್ಕ್ರೀನ್‌ನಿಂದಾಗಿಫೋಟೋ, ವಿಡಿಯೋ, ಸಿನಿಮಾ ಮತ್ತು ಗೇಮ್‌ಗಳು ಅತ್ಯುತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ಸಾಧ್ಯ. ಇದರಲ್ಲಿನ 6.5 ಇಂಚಿನ ಮ್ಯಾಕ್ಸ್ ವಿಶನ್ ಎಚ್‌ಡಿ+ಡಿಸ್ ಪ್ಲೇ 20:9 ಅನುಪಾತದಲ್ಲಿ ಗರಿಷ್ಠ ಮಟ್ಟದ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತದೆ.

* 64 ಜಿಬಿ ಬಿಲ್ಟ್-ಇನ್ ಸ್ಟೋರೇಜ್, ಮೈಕ್ರೋ ಎಸ್‌ಡಿ ಸ್ಲಾಟ್‌ನಲ್ಲಿ 512 ಜಿಬಿವರೆಗೆ ಸ್ಟೋರೇಜ್ ಸಾಮರ್ಥ್ಯವಿದೆ.

* ಕ್ಲಂಕಿ ಸಾಫ್ಟ್‌ವೇರ್ ಸ್ಕಿನ್ಸ್ ಇರುವುದಿಲ್ಲ. ಅಲ್ಲದೆ, ಯಾವುದೇ ನಕಲಿ ಆ್ಯಪ್‌ಗೆ ಅವಕಾಶವೇ ಇರುವುದಿಲ್ಲ. ಆ್ಯಂಡ್ರಾಯ್ಡ್ 10 ಒಳಗೊಂಡಿದೆ.

* 2 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್‌ಗಳ ಭರವಸೆಯನ್ನು ಈ ಸ್ಮಾರ್ಟ್ ಫೋನ್ ಒಳಗೊಂಡಿದೆ.

* ಪ್ರತ್ಯೇಕವಾದ ಗೂಗಲ್ ಅಸಿಸ್ಟೆಂಟ್ ಬಟನ್ ಹೊಂದಿದೆ. ವಾಯ್ಸ್ ಕಂಟ್ರೋಲ್ ಕೂಡ ಇದೆ. ಇಲ್ಲಿ ಟೈಪ್, ಟ್ಯಾಪ್ ಅಥವಾ ಸ್ವೈಪ್ ಮಾಡುವ ಅಗತ್ಯವಿರುವುದಿಲ್ಲ.

* ಇದರಲ್ಲಿನ ಡ್ಯುಯೆಲ್ ಬ್ಯಾಂಡ್ ವೈಫೈ ಸಪೋರ್ಟ್‌ನಿಂದ ಯಾವುದೇ ಅಡಚಣೆ ಇಲ್ಲದೇ ವರ್ಕ್ ಫ್ರಂ ಹೋಂ ಜವಾಬ್ದಾರಿ ನಿರ್ವಹಿಸಬಹುದು.

* ಫೇಸ್ ರೆಕಗ್ನಿಶನ್ ಮತ್ತು ಫಿಂಗರ್ ಪ್ರಿಂಟ್ ರೀಡರ್ ವ್ಯವಸ್ಥೆ ಇದ್ದು, ಇವುಗಳೇ ಪಾಸ್ವರ್ಡ್ ಕೂಡ ಆಗಿರುತ್ತವೆ.

ಲಭ್ಯತೆ ಮತ್ತು ಬೆಲೆ

* ಡೀಪ್ ಸಫೈರ್ ಬ್ಲ್ಯೂ ಮತ್ತು ನ್ಯಾಚುರಲ್ ಫಾರೆಸ್ಟ್ ಗ್ರೀನ್‌ ಹೀಗೆ ಎರಡು ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.

* ಫ್ಲಿಪ್ ಕಾರ್ಟ್‌ನಲ್ಲಿ ಇದೇ 31ರ ಮಧ್ಯಾಹ್ನ 12 ಗಂಟೆಯಿಂದ ಖರೀದಿಸಬಹುದು.

* ಸ್ಮಾರ್ಟ್ ಫೋನ್ ಬೆಲೆ ₹11,499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.