ADVERTISEMENT

ಭಾರತದಲ್ಲಿ ನೋಕಿಯಾ ಬಜೆಟ್‌ ಫೋನ್‌: ಬೆಲೆ ₹ 8,199

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 12:51 IST
Last Updated 18 ಡಿಸೆಂಬರ್ 2019, 12:51 IST
ನೋಕಿಯಾ 2.3
ನೋಕಿಯಾ 2.3   

ಬೆಂಗಳೂರು:ದೇಶೀಯ ಮಾರುಕಟ್ಟೆಗೆ ನೋಕಿಯಾ ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.ಎಚ್‌ಎಂಡಿ ಗ್ಲೋಬಲ್‌ನ 'ನೋಕಿಯಾ 2.3' ಬುಧವಾರ ಭಾರತದಲ್ಲಿ ಅನಾವರಣಗೊಂಡಿದ್ದು, ಡಿಸೆಂಬರ್‌ 27 ಖರೀದಿಗೆ ಲಭ್ಯವಾಗಲಿದೆ.

2020ರ ಮಾರ್ಚ್‌ 31ರೊಳಗೆ ನೋಕಿಯಾ 2.3 ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಕಂಪನಿ ಒಂದು ವರ್ಷ ರೀಪ್ಲೇಸ್‌ಮೆಂಟ್‌ ಗ್ಯಾರಂಟಿ ನೀಡುತ್ತಿದೆ. ಸಯಾನ್ ಗ್ರೀನ್‌, ಚಾರ್ಕೋಲ್‌ ಹಾಗೂ ಸ್ಯಾಂಡ್‌ ಮೂರು ಬಣ್ಣಗಳಲ್ಲಿ ಫೋನ್‌ ಲಭ್ಯವಿದ್ದು, ಬೆಲೆ ₹ 8,199 ನಿಗದಿಯಾಗಿದೆ.

ಏನೆಲ್ಲ ಇದೆ?

ADVERTISEMENT

ಅಲ್ಯೂಮಿನಿಯಂ ಹೊರ ಕವಚ, 6.2 ಇಂಚು ಎಚ್‌ಡಿ ಡಿಸ್‌ಪ್ಲೇ, ಮೀಡಿಯಾಟೆಕ್ ಹೀಲಿಯೊ ಎ22 ಚಿಪ್‌ಸೆಟ್‌, 2 ಜಿಬಿ ರ್‍ಯಾಮ್‌ ಹಾಗೂ 32 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ಗರಿಷ್ಠ 400 ಜಿಬಿ ಸಂಗ್ರಹಿಸಲು ಅವಕಾಶವಿದೆ.

ನೋಕಿಯಾ 2.3 ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ. 13 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಮತ್ತು ಎಲ್‌ಇಡಿ ಫ್ಲಾಷ್‌ ಇದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ.ಎರಡು ಸಿಮ್‌ಗಳನ್ನು ಬಳಸಲು ಅವಕಾಶವಿದ್ದು, 4ಜಿ ವೋಲ್ಟ್‌ ಸಪೋರ್ಟ್‌ ಇದೆ. ಎಫ್‌ಎಂ ರೇಡಿಯೊ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌, ಬ್ಲೂಟೂತ್ 5.0 ಹೊಂದಿದೆ.

ಎರಡು ದಿನ ಬ್ಯಾಟರಿ ಚಾರ್ಜ್‌

4000 ಎಂಎಎಚ್‌ ಬ್ಯಾಟರಿ ಒಮ್ಮೆ ಚಾರ್ಜ್‌ ಮಾಡಿದರೆ, ಆ್ಯಂಡ್ರಾಯ್ಡ್‌ 9ರ ಎಐ ಅಸಿಸ್ಟ್ 'ಅಡಾಪ್ಟೀವ್‌ ಬ್ಯಾಟರಿ' ಗುಣದಿಂದಾಗಿ ಎರಡು ದಿನಗಳ ಬಳಕೆಗೆ ಚಾರ್ಜ್‌ ಉಳಿಯುತ್ತದೆ. ಈ ಬ್ಯಾಟರಿ 5 ವ್ಯಾಟ್‌ ಚಾರ್ಜಿಂಗ್‌ ಸಪೋರ್ಟ್‌ ಹೊಂದಿದೆ. ಆ್ಯಂಡ್ರಾಯ್ಡ್‌ ಒನ್‌ ಪ್ಲಾಟ್‌ಫಾರ್ಮ್‌ ಒಳಗೊಂಡ ಸ್ಮಾರ್ಟ್‌ಫೋನ್‌ 'ಆ್ಯಂಡ್ರಾಯ್ಡ್‌ 9 ಪೈ ಔಟ್‌–ಆಫ್‌–ದಿ–ಬಾಕ್ಸ್‌' ಒಎಸ್‌ನೊಂದಿದೆ ಬರುತ್ತಿದ್ದು, ಆ್ಯಂಡ್ರಾಯ್ಡ್‌ 10 ಅಪ್‌ಡೇಟ್‌ಗೆ ಸಿದ್ಧವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.