ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಬಿಡುಗಡೆ: ಬೆಲೆ, ಲಭ್ಯತೆ ವಿವರ ಇಲ್ಲಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಸ್ಮಾರ್ಟ್ ಫೋನ್ ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2024, 6:33 IST
Last Updated 5 ಮಾರ್ಚ್ 2024, 6:33 IST
<div class="paragraphs"><p>ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ</p></div>

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ

   

ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ ಸ್ಮಾರ್ಟ್ ಫೋನ್ ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಶ್ರೇಣಿಯ ಫೋನ್‌ಗಳಲ್ಲಿ ಗರಿಷ್ಠ 6000 ಎಂಎಎಚ್ ಬ್ಯಾಟರಿ, ಎಸ್ಅಮೊಲೆಡ್ ಡಿಸ್‌ಪ್ಲೇ, 4 ಪೀಳಿಗೆಯ ಆಂಡ್ರಾಯ್ಡ್ ಅಪ್ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್‌ಗಳ ಕೊಡುಗೆಯು ಈ ಫೋನ್‌ಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಗ್ಯಾಲಕ್ಸಿ ಎಫ್15 5ಜಿ ಫೋನ್ 6.5 ಇಂಚಿನ sAMOLED ಡಿಸ್‌ಪ್ಲೇ ಒಳಗೊಂಡಿದ್ದು, ಪ್ರಖರ ಸೂರ್ಯನ ಬೆಳಕಲ್ಲಿಯೂ ಸುಲಭವಾಗಿ ಸ್ಕ್ರೀನ್ ವೀಕ್ಷಣೆಗೆ ನೆರವಾಗುತ್ತದೆ.

6000 ಎಂಎಎಚ್ ಬ್ಯಾಟರಿ, 25 ವ್ಯಾಟ್ ಸೂಪರ್-ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ ಹೊಂದಿದೆ. RAM ಪ್ಲಸ್ ಫೀಚರ್ ಹೊಂದಿದ್ದು, 12 GB ವರೆಗಿನ ಹೆಚ್ಚುವರಿ ವರ್ಚುವಲ್ RAM ಅನ್ನು ಒದಗಿಸುತ್ತದೆ.

ಗ್ಯಾಲಕ್ಸಿ ಎಫ್15ಜಿ ಫೋನ್‌ನಲ್ಲಿ ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (ವಿಡಿಐಎಸ್) ತಂತ್ರಜ್ಞಾನ ಹೊಂದಿದ್ದು, 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಳಿಗಾಗಿ 13 ಎಂಪಿ ಫ್ರಂಟ್ ಕ್ಯಾಮೆರಾ ಇದರಲ್ಲಿದೆ.

ಉತ್ತಮ ಕರೆ ಅನುಭವ, ವಾಯ್ಸ್ ಫೋಕಸ್, ನಾಕ್ಸ್ (Knox) ಸುರಕ್ಷತೆ ಹೊಂದಿರುವ ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯ. 4ಜಿಬಿ+128ಜಿಬಿ ಮತ್ತು 6ಜಿಬಿ+128ಜಿಬಿ ಸ್ಟೋರೇಜ್ ಮಾದರಿಗಳ ಬೆಲೆ ಅನುಕ್ರಮವಾಗಿ ₹11,999 ಹಾಗೂ ₹13,499. ಇದು ಮಾರ್ಚ್ 11ರಿಂದ ಖರೀದಿಗೆ ಲಭ್ಯವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.