ADVERTISEMENT

Galaxy M02: ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2021, 13:57 IST
Last Updated 2 ಫೆಬ್ರುವರಿ 2021, 13:57 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ M02
ಸ್ಯಾಮ್‌ಸಂಗ್ ಗ್ಯಾಲಕ್ಸಿ M02   

ಬೆಂಗಳೂರು: ಜಗತ್ತಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ, ದೇಶದ ಮಾರುಕಟ್ಟೆಗೆ ಕಡಿಮೆ ಬಜೆಟ್ ದರದ ಆಕರ್ಷಕ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದೆ. ಗ್ಯಾಲಕ್ಸಿ ಸರಣಿಯಲ್ಲಿ ಸ್ಯಾಮ್‌ಸಂಗ್ ಹೊಸ M02 ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಸ್ಯಾಮ್‌ಸಂಗ್ ಫೋನ್ ವಿಶೇಷತೆಯೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಎಂ.ಜೆ.ಎಸ್.ಎ ಮತ್ತು ಎಫ್ ಸರಣಿಯಲ್ಲಿ ವಿವಿಧ ಮಾದರಿಯ ಫೋನ್‌ಗಳನ್ನು ಪರಿಚಯಿಸುತ್ತದೆ. ಈ ಪೈಕಿ, ಈ ಬಾರಿ ಎಂ ಸರಣಿಯಲ್ಲಿ ಬಜೆಟ್ ದರದ ಗ್ಯಾಲಕ್ಸಿ M02 ಫೋನ್ ಬಿಡುಗಡೆ ಮಾಡಿದೆ.

ADVERTISEMENT

ಗ್ಯಾಲಕ್ಸಿ M02

ಹೊಸ ಗ್ಯಾಲಕ್ಸಿ M02 ಫೋನ್, 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ MT6739W ಒಕ್ಟಾ ಕೋರ್ ಪ್ರೊಸೆಸರ್ ಮತ್ತು PowerVR Rogue GE8100 GPU ಬೆಂಬಲ ಹೊಂದಿದೆ. ಆಂಡ್ರಾಯ್ಡ್ 10 ಆಧಾರಿತ One UI ಓಎಸ್ ಇದರಲ್ಲಿದೆ. 2 GB ಮತ್ತು 3 GB RAM, ಹಾಗೂ 32 GB ಸ್ಟೋರೇಜ್ ಇದರಲ್ಲಿದೆ. ಜತೆಗೆ 5000mAh ಬ್ಯಾಟರಿ ಸೌಲಭ್ಯವಿದೆ.

ಕ್ಯಾಮರಾ ಎಷ್ಟಿದೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ M02 ಸ್ಮಾರ್ಟ್‌ಫೋನ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದೆ.

ಬೆಲೆ ಎಷ್ಟು?

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M02 ಫೋನ್, 2GB RAM + 32GB ಮಾದರಿಗೆ ₹6,999 ದರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.